ಬಂಟ್ವಾಳ: ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಲಲಿತಾ ಪಂಚಮಿ ಪರ್ವಕಾಲದಲ್ಲಿ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ಹಾಗೂ ಸಾಮೂಹಿಕ ಶ್ರೀ ಲಲಿತ ಸಹಸ್ರ ನಾಮ ಅರ್ಚನೆ ಹಾಗೂ ಪಾರಾಯಣ ಅನ್ನದಾನದೊಂದಿಗೆಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಚಕ ಗಣಪತಿ ಮಹಾಬಲೇಶ್ವರ ಭಟ್, ಜಿ ರಾಮಕೃಷ್ಣ ಭಟ್, ಡಾ ಶಿವರಾಮ ಜೋಶಿ, ಟ್ರಸ್ಟ್ ಅಧ್ಯಕ್ಷ ಕೆ ರಾಧಾಕೃಷ್ಣ ಆಳ್ವ, ನಿವೃತ್ತ ಸೇನಾ ಕಮಾಂಡರ್ ವಸಂತ ರಾವ್, ಪ್ರವೀಣ್ ಆಳ್ವಾ, ಪ್ರದೀಪ್ ಭಂಡಾರಿ, ಸತ್ಯನಾರಾಯಣ ನಾಯಕ್, ಸುಧಾಕರ ಕೆ.ಟಿ ಮೊದಲಾದವರು ಉಪಸ್ಥಿತರಿದ್ದರು,