ಓಂ ಫ್ರೆಂಡ್ಸ್ ಕ್ಲಬ್ ( ರಿ ) ಕಳ್ಳಿಗೆ.ಪಚ್ಚಿನಡ್ಕ.ಬಂಟ್ವಾಳ ತಾಲೂಕು ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 27 ವರ್ಷದ ಮೊಸರು ಕುಡಿಕೆ ಉತ್ಸವ ಶುಕ್ರವಾರ ಸಂಘದ ಶ್ರೀ ಕೃಷ್ಣ ವೇದಿಕೆ ಯ ವಠಾರ ದಲ್ಲಿ ಜರಗಿತು.
ಬೆಳಗ್ಗೆ ಶ್ರೀ ಕೃಷ್ಣ ದೇವರ ಪ್ರತಿಷ್ಠಾಪನೆ ನಡೆದು ಓಂ ಫ್ರೆಂಡ್ಸ್ ರಾಧಾಕೃಷ್ಣ ಭಜನಾ ಮಂಡಳಿಯವರಿಂದ ಮಧ್ಯಾಹ್ನದವರೆಗೆ ಭಜನಾ ಸಂಕೀರ್ತನೆ ನಡೆಯಿತು
.ನಂತರ ಮದ್ಯಾಹ್ನ ಹುಡುಗ,ಹುಡುಗಿಯರು.ಪುರುಷರ ಮತ್ತು ಮಹಿಳೆ ಯರ ವಿಭಾಗ ಗಳಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸಮಾರೋಪ ಸಭಾ ಕಾರ್ಯಕ್ರಮದಲ್ಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆಯೊಂದಿಗೆ ಚಿಲಿ ಪಿಲಿ ಗೊಂಬೆ ಬಳಗದ ಶಂಕರ ನಾರಾಯಣ ಹೊಳ್ಳ ಬಿಸಿರೋಡ್ ಹಾಗು ಬಿ.ಎಸ್.ಬ್ಯಾಂಡ್ ಸೆಟ್ ಬ್ರಹ್ಮರ ಕೂಟ್ಲು ಬಿ.ಭೋಜ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ವಹಿಸಿದ್ದರು. ಸಂಘದ ಮಹಾ ಪೋಷಕರಾದ ಚಂದ್ರಾವತಿ ಸೇಸಪ್ಪ ಕೋಟ್ಯಾನ್, ಹಿರಿಯರಾದ ನಾರಾಯಣ ಆಚಾರ್ಯ ಕಳ್ಳಿಗೆ, ಸಂಘದ ಪದಾಧಿಕಾರಿಗಳಾದ ಸದಾಶಿವ ಆಚಾರ್ಯ,ರಾಜೇಶ್ ಆಚಾರ್ಯ,ಚರಣ್ ರಾಜ್ ಆಚಾರ್ಯ, ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕರಾದ ಸಂತೋಷ್ ಪಚ್ಚಿನಡ್ಕ, ಪ್ರಶಾಂತ್ ಪಚ್ಚಿನಡ್ಕ, ಅಮಿತಾ ವಿಶ್ವನಾಥ್ ದಾಸರಕೋಡಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಚರಣ್ ರಾಜ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಹರೀಶ್ ಶೆಟ್ಟಿ ಪಡು ಹಾಗು ತೇಜಾಕ್ಷಿ ನಿರೂಪಿಸಿದರು.
ನಂತರ ಶ್ರೀ ಕೃಷ್ಣ ದೇವರ ಶೋಭಾಯಾತ್ರೆ ಗೋರೆಮಾರ್ ನಿಂದ ಪಚ್ಚಿನಡ್ಕ ದ ವರೆಗೆ ಬಹಳ ವಿಜೃಂಭಣೆ ಯಿಂದ ಸಾಗಿತು. ಶ್ರೀ ಓಂ ಫ್ರೆಂಡ್ಸ್ ರಾಧಾಕೃಷ್ಣ ಭಜನಾ ಮಂಡಳಿ ಯ ಸದಸ್ಯರ ಕುಣಿತ ಭಜನೆಯೊಂದಿಗೆ ಸಾಗಿದ ಈ ಶೋಭಾ ಯಾತ್ರೆಯಲ್ಲಿ ಚಿಲಿಪಿಲಿ ಗೊಂಬೆ ಬಳಗ. ಬಿಸಿರೋಡ್ , ಬಿ.ಸ್.ಬ್ಯಾಂಡ್ ಸೆಟ್, ಬ್ರಹ್ಮರಕೂಟ್ಲು, ಪೊಳಲಿ ಯುವಕರ ನಾಸಿಕ್ ಬ್ಯಾಂಡ್, ಕೇಶವ ಸಜಿಪ ಅವರ ವಿವಿಧ ರೀತಿಯ ಗೊಂಬೆಗಳು ಪ್ರದರ್ಶನ ನೀಡಿದವು..