ಬಂಟ್ವಾಳ: ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ 49ನೇ ವರ್ಷದ ಮೊಸರು ಕುಡಿಕೆ ಉತ್ಸವ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯ ವಠಾರದಲ್ಲಿ ಶನಿವಾರ ನಡೆಯಿತು.
ಶ್ರೀ ರಕ್ತೇಶ್ವರಿ ಕ್ರಿಕೆಟರ್ಸ್ ಬಿ.ಸಿ.ರೋಡ್ ಸಹಕಾರದೊಂದಿಗೆ ನಡೆದ ಈ ಉತ್ಸವ ಮೊದಲ ಬಾರಿಗೆ ಎಂಬಂತೆ ಬಿ.ಸಿ.ರೋಡ್ ನ ಕೈಕುಂಜೆಯಿಂದ ಶ್ರೀ ರಕ್ತೇಶ್ವರಿ ಸನ್ನಿಧಿಯವರೆಗೆ ನಿರ್ಮಿಸಲಾಗಿದ್ದ ಶ್ರೀಕೃಷ್ಣನ ಬಾಲಲೀಲೋತ್ಸವ ಪ್ರತೀಕವಾದ ಮೊಸರು ಗಡಿಗೆಗಳನ್ನು ಒಡೆಯುವ ಸನ್ನಿವೇಶದ ಪುನರ್ ನಿರ್ಮಾಣ ಕಾರ್ಯ ನಡೆಯಿತು.
ಚೆಂಡೆ ಕುಣಿತದೊಂದಿಗೆ ಕೈಕುಂಜದಿಂದ ಬಿ.ಸಿ.ರೋಡ್ ವರೆಗೆ ವೈಭವದ ಶೋಭಾಯಾತ್ರೆಗೆ ನೂರಾರು ಮಂದಿ ಸಾಕ್ಷಿಯಾದರು. ಅಷ್ಟಮಿ ಅಂಗವಾಗಿ ರಂಗೋಲಿ ಸ್ಪರ್ಧೆ, ಸಂಗೀತ ಸ್ಪರ್ಧೆ, ಶ್ರೀಕೃಷ್ಣ ಚಿತ್ರ ಬಿಡಿಸುವ ಸ್ಪರ್ಧೆ, ಪುಟಾಣಿಗಳಿಗೆ ಕೃಷ್ಣ ವೇಷ ಸ್ಪರ್ಧೆ, ತೆಂಗಿನ ಕಾಯಿ ಒಡೆಯುವ ಸ್ಪರ್ಧೆ, ಅಡಿಕೆ ಮರ ಹತ್ತುವ ಸ್ಪರ್ಧೆಗಳು ಹಾಗೂ ಭಕ್ತಿಗಾನ ವೈಭವ, ಸಂಗೀತ ಗಾನಸುಧೆ ಮತ್ತು ನಾಟಕ ಪ್ರದರ್ಶನ ಸಹಿತ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆರದವು. ರಕ್ತೇಶ್ವರಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ಮೋಹನ್ , ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಭಂಡಾರಿ ಕುಲತಬೆಟ್ಟು, ಶ್ರೀ ರಕ್ತೇಶ್ವರಿ ಕ್ರಿಕೆಟರ್ಸ್ ಅಧ್ಯಕ್ಷ ಕಿರಣ್ ಸಹಿತ ಸಹಿತ ಸೇವಾ ಸಮಿತಿ ಹಾಗೂ ಗಣೇಶೋತ್ಸವ ಸಮಿತಿ, ಶ್ರೀ ರಕ್ತೇಶ್ವರಿ ಕ್ರಿಕೆಟರ್ಸ್ ಸಮಿತಿ, ಮೊಸರುಕುಡಿಕೆ ಸಮಿತಿಯ ನಾನಾ ಪದಾಧಿಕಾರಿಗಳು ಭಕ್ತರು ಹಾಜರಿದ್ದರು.