ಕಲ್ಲಡ್ಕ

ಸುವರ್ಣ ಸಂಭ್ರಮಕ್ಕೊಂದು ಮುನ್ನುಡಿ: ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ

ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ‘ಸುವರ್ಣ ಸಂಭ್ರಮಕ್ಕೊಂದು ಮುನ್ನುಡಿ’ ಎನ್ನುವ ವಿಶೇಷ ಕಾರ್ಯಕ್ರಮ ಜರುಗಿತು.

ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಸತೀಶ್ ಆಳ್ವ ಇರಾ ಬಾಳಿಕೆ ಅವರು ಹೊಸ ಕಾಮಗಾರಿಗೆ ಶಿಲಾನ್ಯಾಸವನ್ನು ನೆರವೇರಿಸಿ ಶುಭ ಹಾರೈಸಿದರು.ಹಿರಿಯ ವಿದ್ಯಾರ್ಥಿ, ಉದ್ಯಮಿ ಮಾಧವ ಮಾವೆ ಮಾತನಾಡಿ, ತಾನು ಕಲಿತ ಶಾಲೆಯ ಋಣವನ್ನು ತೀರಿಸುವ ಅವಕಾಶವಾಗಿ ಮೂಡಿಬಂದಿದೆ ಎಂದರು.

OPTIC WORLD

ಸಮಿತಿಯ ಅಧ್ಯಕ್ಷರಾದ ಡಾ. ಮಮತಾ ಪಿ ಶೆಟ್ಟಿ  ಮಾತನಾಡಿ, ಸುವರ್ಣ ಮಹೋತ್ಸವ ಕೇವಲ ಒಂದು ಸಂಭ್ರಮವಾಗದೆ  ಮುಂದಿನ ನೂರು ವರ್ಷಗಳ ಯೋಜನೆಯಂತೆ ಅರ್ಥಪೂರ್ಣವಾಗಿ ಮೂಡಿ ಬರಬೇಕು. ಎಂದರು.

ಜಾಹೀರಾತು
VNR GOLD

ಈ ಸಂದರ್ಭ ಹಣ್ಣಿನ ಗಿಡ ನೆಡಲಾಯಿತು. ಹಿರಿಯ ವಿದ್ಯಾರ್ಥಿ ಹಾಗೂ ಅಮೆರಿಕ ಉದ್ಯಮಿ ವೆಂಕಟೇಶ್ ನಾಯ್ಕ್ ನಿರ್ಬೈಲು ಕೊಡುಗೆಯಾಗಿ ನಿರ್ಮಿಸಿದ ತರಗತಿ ಕೊಠಡಿಯ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ದಾನಿಗಳ ಸಹೋದರ  ವಿಶ್ವನಾಥ ನಾಯ್ಕ ನಿರ್ಬೈಲು ಶಾಲೆಗೆ ಹಸ್ತಾಂತರಿಸಿದರು.

ಎಂ ಆರ್ ಪಿ ಎಲ್ ಸಂಸ್ಥೆಯ ಅನುದಾನದಿಂದ ಒದಗಿಸಿದ ಸೋಲಾರ್ ವಿದ್ಯುತ್ ಘಟಕವನ್ನು ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿಗಳಾದ ಚಂದ್ರಹಾಸ ರೈ ಬಾಲಾಜಿಬೈಲು ಉದ್ಘಾಟಿಸಿದರು. ಸೆಲ್ಕೋ ಸೋಲಾರ್ ಸಂಸ್ಥೆಯ ಪ್ರತಿನಿಧಿ ರವೀನ್ ಅವರನ್ನು ಸನ್ಮಾನಿಸಲಾಯಿತು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ ಬಿ ಎಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಪ್ರಧಾನ ಗೌರವಾಧ್ಯಕ್ಷರಾದ ಸತೀಶ್ ಕುಮಾರ್ ಆಳ್ವ,  ಅಧ್ಯಕ್ಷರಾದ ಡಾ. ಮಮತಾ ಪಿ ಶೆಟ್ಟಿ  ಹಾಗೂ ಸಮಿತಿಯ ಕಾರ್ಯನಿರ್ವಹಣಾ ಕಾರ್ಯದರ್ಶಿ ಹಾಜಿ ಸುಲೈಮಾನ್ ಜಿ ಸುರಿಬೈಲು, ಕಾರ್ಯದರ್ಶಿ ಮ್ಯಾಕ್ಸಿಮ್ ಫರ್ನಾಂಡಿಸ್, ಕೋಶಾಧಿಕಾರಿಯವರಾದ ಲಯನ್ ಉಮಾನಾಥ ರೈ ಮೇರಾವು, ಜೊತೆ ಕಾರ್ಯದರ್ಶಿ ಸುರೇಖಾ ಡಿ ಶೆಟ್ಟಿ, ಜೊತೆಕೋಶಾಧಿಕಾರಿ ಹರಿಪ್ರಸಾದ್ ಕುಲಾಲ್ ನಾರ್ಶ, ಸಂಚಾಲಕರಾದ ರಮಾನಂದ ನೂಜಿಪ್ಪಾಡಿ ಇವರಿಗೆ ಸಾಕ್ಷಿ ಪತ್ರ ಹಸ್ತಾಂತರಿಸುವ ಮೂಲಕ ಸಮಿತಿಯನ್ನು ಅಧಿಕೃತಗೊಳಿಸಲಾಯಿತು.

D.SHIVA BHAT JWELLERS

ಸಭಾಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ್ ರಾವ್ ಮಂಚಿ ವಹಿಸಿದ್ದರು. ಡಾ. ಗೋಪಾಲಾಚಾರ್ ಮಂಚಿ,  ರಮೇಶ್ ರಾವ್ ಪತ್ತುಮುಡಿ, ದಿವಾಕರ ಕುಂಟೂರು, ಡಾ. ನಾಗವೇಣಿ ಮಂಚಿ, ಹಿರಿಯ ವಿದ್ಯಾರ್ಥಿ ದೇವಕಿ ಎಚ್, ಗಣೇಶ್ ಪ್ರಭು, ಎಂ. ಡಿ. ಮಂಚಿ, ಯಶೋಧ ಬಿ ಶೆಟ್ಟಿ, ಉಮ್ಮರ್ ಕುಂಞ ಸಾಲೆತ್ತೂರು, ರಮೇಶ ಟೈಲರ್ ಕೋಕಳ, ಹನೀಫ್ ಮಂಚಿ , ಜಯಂತ ಕುಕ್ಕಾಜೆ,  ಇಬ್ರಾಹಿಂ ಮಂಚಿ, ಹಾಗೂ ಇನ್ನೂ ಅನೇಕ ಮಹನೀಯರು ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಸುಶೀಲ ವಿಟ್ಲ ಪ್ರಸ್ತಾವಿಕವಾಗಿ ಮಾತನಾಡಿದರು. ಹಿಂದಿ ಭಾಷಾ ಶಿಕ್ಷಕಿ ಶಾಂತ ಎಸ್ ವಂದಿಸಿದರು. ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.