ಬಂಟ್ವಾಳ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಪಡೆಯುತ್ತಿರುವ ಫಲಾನುಭವಿಗಳ ಆಧಾರ್ ಸೀಡಿಂಗ್ ಮತ್ತು ಇ – ಕೆವೈಸಿ ಯನ್ನು ಕಡ್ಡಾಯವಾಗಿ ಮಾಡಬೇಕಾಗಿದ್ದು.ಎಲ್ಲಾರು ಸೆ.30 ರೊಳಗೆ ಮಾಡಬೇಕಾಗಿ ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಇ-ಕೆವೈಸಿ ದೃಢಿಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 45,480, ಇ-ಕೆವೈಸಿ ದೃಡೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿ ಫಲಾನುಭವಿಗಳ ಸಂಖ್ಯೆ 141923 ಇರುತ್ತದೆ. ಅರ್ಹ ಫಲಾನುಭವಿಗಳ ಪಡಿತರ ಚೀಟಿ ರದ್ದಗಾದಂತೆ ನೋಡಿಕೊಳ್ಳುವ ಜವಾಬ್ದಾರಿ ಪಡಿತರ ಅಂಗಡಿಯವರದ್ದಾಗಿದೆ ಎಂದವರು ತಿಳಿಸಿದ್ದಾರೆ.
ಗೃಹ ಜ್ಯೋತಿ ಮರುಪರಿಶೀಲನೆಗೆ ಬಾಕಿ ಉಳಿದವರು ತಮ್ಮ ದಾಖಲೆಗಳನ್ನು ನೀಡಿ ಅಗಸ್ಟ್ 30 ರ ಒಳಗ್ಗೆ ನಿಮ್ಮ ಹತ್ತಿರದ ಮೇಸ್ಕಾ ಅಧಿಕಾರಿಗಳನ್ನು ಸಂಪರ್ಕಿಸಿ ಗೃಹಜ್ಯೋತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರ ಯುವ ದೃಷ್ಟಿಕೋನ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ಸಂಘಟನಾ ಶಕ್ತಿಯೊಂದಿಗೆ ಯುವಕ ಯುವತಿಯರನ್ನು ಒಗ್ಗೂಡಿಸುವ ಭಾರತ್ ಜೋಡೋ ಸಂಘಟನೆ (BJYS) ಅಭಿಯಾನಕ್ಕೆ ಬಂಟ್ವಾಳ ತಾಲೂಕಿನ 16 ರಿಂದ 35 ವರುಷದ ಯುವಕ,ಯುವತಿಯರು ಸದಸ್ಯತ್ವ ಪಡೆಯಲು ನೊಂದಾವಣಿ ಮಾಡಿಕೊಂಡು ಗ್ರಾಮದ ಅಭಿವೃದ್ಧಿ ಹಾಗೂ ಸೇವೆ ಮಾಡುವ ಅವಕಾಶವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದರು.
(more…)