ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ (KCPL) ನೂತನ ಶಾಖೆಯು ಬಿಸಿ ರೋಡ್‌ನಲ್ಲಿ ಉದ್ಘಾಟನೆಗೊಂಡಿತು.ಕಚೇರಿ ವಿಳಾಸ ಹೀಗಿದೆ. Kodchadri Chit Pvt Ltd, First floor Crystal plaza Opposiite LIC office Kaikamba BC Road Ph 6360661402
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ನಿಗ್ರಹದಳದ ಕರ್ನಾಟಕ ರಾಜ್ಯ ಮಂಡಳಿಯ ನಿರ್ದೇಶಕರಾದ ಹಿಶಾಮ್ ವಿ. ಕೆ. ವಿಟ್ಲ, ಉದ್ಯಮಿಗಳಾದ ಶರತ್ ಎನ್. ಎಸ್. ವಿಟ್ಲ ಹಾಗೂ ಅಜೀಮ್ ಬಿಸಿ ರೋಡ್ ಕೈಕಂಬ, ಎಲ್.ಐ.ಸಿ ಸಂಸ್ಥೆಯ ಅಧಿಕಾರಿ ರಾಮಯ್ಯ ಶೆಟ್ಟಿ ಎಸ್. ಉಪಸ್ಥಿತರಿದ್ದರು.
ಸಂಸ್ಥೆಯ ಝೋನಲ್ ಮ್ಯಾನೇಜರ್ ಸಂದೀಪ್ ಕುಮಾರ್, ಕ್ಲಸ್ಟರ್ ಮ್ಯಾನೇಜರ್ ಸುನಿಲ್ ಕುಮಾರ್ ಬಿ.ಆರ್., ಶಾಖಾ ಮ್ಯಾನೇಜರ್ ಮಂಜುನಾಥ್ ಎಸ್.ಪಿ. ಹಾಗೂ ಸಂಸ್ಥೆಯ ಸಿಬ್ಬಂದಿವರ್ಗದವರು ಮತ್ತು ಇತರ ಗಣ್ಯರು ಭಾಗವಹಿಸಿದ್ದರು.
ಕರ್ನಾಟಕದ ಹಣಕಾಸು ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ವರ್ಷಗಳ ಸೇವಾನುಭವ ಹೊಂದಿರುವ ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ‘ಕೊಡಚಾದ್ರಿ ಗ್ರೂಪ್ ಆಫ್ ಕಂಪನೀಸ್’ನ ಪ್ರಮುಖ ಸಂಸ್ಥೆಯಾಗಿದೆ. 2006ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯು ಕಾರ್ಪೊರೇಟ್ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದ್ದು, ರಾಜ್ಯಾದ್ಯಂತ 110ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. “ಹಳೆಯ ತಲೆಮಾರಿನ ಸಾಂಪ್ರದಾಯಿಕ ಸಮುದಾಯ ಉಳಿತಾಯ ಕಲ್ಪನೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ“ ಎಂದು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪರಶುರಾಮ್ ಕೆ. ಎನ್. ಅವರು ಈ ಸಂದರ್ಭದಲ್ಲಿ ಸಂದೇಶ ನೀಡಿದ್ದಾರೆ.
(more…)