ಬಂಟ್ವಾಳ

ಬಿ.ಸಿ ರೋಡ್ ಎಂಐಟಿಇ ಕಾಲೇಜ್ ನ ಓರಿಯೆಂಟೇಶನ್ ಕಾರ್ಯಕ್ರಮ

ಬಿ.ಸಿ ರೋಡ್ ಹಾಗೂ ಪಂಪ್ ವೆಲ್ ನಲ್ಲಿ ಕಾರ್ಯಾಚರಿಸುತ್ತಿರುವ ಎಂಐಟಿಇ ಟೆಕ್ನಿಕಲ್ ಆ್ಯಂಡ್ ಪ್ರೊಫೆಶನಲ್ ಕಾಲೇಜ್ ನ ಓರಿಯೆಂಟೇಶನ್ ಕಾರ್ಯಕ್ರಮ ಗುರುವಾರ ಬಿ.ಸಿ ರೋಡ್ ನ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.

VNR GOLD

ಸಂಶೋಧಕರು ಹಾಗೂ ಅಪ್ತ ಸಮಾಲೋಚಕ ಡಾ. ಗುರುರಾಜ್ ಇಟಗಿ ಅವರು ಮುಖ್ಯ ಅತಿಥಿಯಾಗಿದ್ದರು. ಸಾಧಿಸುವ ಛಲ, ಇಚ್ಛಾಶಕ್ತಿ ಬೆಳೆಸುವ ಗುಣ ಮಕ್ಕಳಲ್ಲಿ ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಇದರ ಮೂಲಕವೇ ಅಸಾಧಾರಣ ಹೆಜ್ಜೆಯೊಂದಿಗೆ ಮುನ್ನಡೆಯಬಹುದು. ಸಾಮಾನ್ಯ ವ್ಯಕ್ತಿ ಕೂಡ ದೇಶದಲ್ಲಿ ಮಹತ್ತರ ಸಾಧನೆ ಬರೆದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಇವು ನಮಗೆ ಮಾದರಿಯಾಗಬೇಕು ಎಂದು ಹೇಳಿದ ಅವರು ನಿಯಮಿತ ಆಹಾರ, ವ್ಯಾಯಾಮದ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಮೊಬೈಲ್ ಬಳಕೆಯ ಮುನ್ನ ಅದರ ಕುರಿತ ಇತಿ ಮಿತಿ ಹಾಗೂ ಸ್ವ ಅರಿವು, ಜಾಗೃತಿ ಇದ್ದರೆ ಸಮಸ್ಯೆ ಇಲ್ಲ ಎಂದರು.

OPTIC WORLD

ಎಂಐಟಿಇ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ರಾಕೇಶ್ ಕುಮಾರ್ ಮಾತನಾಡಿ ಕಳೆದ 25 ವರ್ಷಗಳಿಂದ ಎಂಐಟಿಇ ಪಂಪ್ ವೆಲ್ ಹಾಗೂ ಬಿ.ಸಿ ರೋಡ್ ನಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ನೀಡುತ್ತ ಬಂದಿದೆ. ಸಾವಿರಾರು ಮಕ್ಕಳು ಇಲ್ಲಿ ಶಿಕ್ಷಣ ಪಡೆದು ವಿವಿಧ ಸ್ತರದಲ್ಲಿ ಉದ್ಯೋಗದಲ್ಲಿದ್ದಾರೆ ಎಂದರು.

ಜಾಹೀರಾತು

ಸಂಸ್ಥೆಯ ನಿರ್ದೇಶಕಿ ನಿಶ್ಮಿತಾ ರಾಕೇಶ್ ಕುಮಾರ್, ಉಪನ್ಯಾಸಕ ಅಶ್ರಫ್, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಿಶಾ ವೇದಿಕೆಯಲ್ಲಿದ್ದರು. ಶಿಕ್ಷಕಿಯರಾದ ಭವ್ಯಶ್ರೀ ಸ್ವಾಗತಿಸಿದರು. ರಕ್ಷಿತ ಅತಿಥಿ ಪರಿಚಯ ಮಾಡಿದರು. ಶಾಂತೇರಿ ವಂದಿಸಿದರು. ಗೀತಾ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts