ಬಂಟ್ವಾಳ: ಬಿ.ಸಿ.ರೋಡಿನ ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ನಡೆಯಲಿರುವ 47ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚನೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ನಡೆಯಿತು. ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಲತಬೆಟ್ಟು ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್ ಕೈಕಂಬ, ಭಾಸ್ಕರ ಟೈಲರ್ ಕಾಮಾಜೆ, ಚರಣ್ ಜುಮಾದಿಗುಡ್ಡೆ, ಕಾರ್ಯದರ್ಶಿಯಾಗಿ ಎಂ.ಸತೀಶ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ರಾಜೇಶ್ ಬಿ.ಮಹಾಕಾಳಿಬೆಟ್ಟು, ಪ್ರದೀಪ್ ಕೆ.ಎನ್, ಕೋಶಾಧಿಕಾರಿಯಾಗಿ ಎನ್.ಶ್ರೀಧರ ಶೆಣೈ, ಜತೆಕಾರ್ಯದರ್ಶಿಯಾಗಿ ಆಶಾ. ಪಿ. ರೈ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಿರಣ್ ಕುಮಾರ್, ಶ್ರೀಧರ್ ಅಲೆತ್ತೂರು, ನರೇಶ್ ಹೊಳ್ಳ ಕಲ್ಲಿಮಾರ್, ಶರತ್ ಕುಮಾರ್. ಪ್ರಣಾಮ್ ಅಜ್ಜಿಬೆಟ್ಟು. ಗೀತಾ ವೈ. ಶೆಟ್ಟಿ, ಲಕ್ಷಣರಾಜ್, ಮಾಧವ ಕೈಕುಂಜೆ, ನವೀನ್ ಶೆಟ್ಟಿ ಮಿತ್ತಬೈಲ್. ನಾಗೇಶ್ ಟೈಲರ್, ಭೋಜ ಸಾಲ್ಯಾನ್. ಶೈಲೇಶ್ ಕೈಕುಂಜೆ. ಅಕ್ಷಯ್ ಕಾಮಾಜೆ ಆಯ್ಕೆಗೊಂಡರು.