ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಬೋಳಂಗಡಿಕೋಡಿ ಎಂಬಲ್ಲಿ ಸಾವಿತ್ರಿ ಅವರ ವಾಸ್ತವ್ಯದ ಮನೆಗೆ ಹಿಂಬದಿಯ ಬರೆ ಜರಿದು ಮಣ್ಣು ಬಿದ್ದು ಭಾಗಶಃ ಹಾನಿಯಾಗಿದೆ. ಕರೋಪಾಡಿ ಗ್ರಾಮದ ಕುರೋವುಮೂಲೆ ನಿವಾಸಿ ರಾಮ ನಾಯ್ಕ ಎಂಬವರ ವಾಸ್ತವ್ಯದ ಮನೆಗೆ ಕರೆಂಟ್ ಕಂಬ ಮುರಿದು ಬಿದ್ದು ಮನೆಗೆ ಭಾಗಶಃ ಹಾನಿಯಾಗಿರುತ್ತದೆ.
ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ಇಕ್ಬಾಲ್ ಹಸಿರ್ ಎಂಬುವರ ಮನೆ ಮಳೆಗೆ ಭಾಗಶಃ ಹಾನಿಯಾಗಿದೆ. ಕುಳ ಗ್ರಾಮದ ಮೋಂಟೆಮಾರು ನಿವಾಸಿ ಗಿರಿಜ ಬಾಬು ಗೌಡ ಎಂಬುವವರ ವಾಸ್ತವ್ಯದ ಮನೆಗೆ ತಾಗಿಕೊಂಡಿದ್ದ ಶೀಟ್ ಅಳವಡಿಸಿದ ಉಪಕಟ್ಟಡ ಗಾಳಿ ಮಳೆಗೆ ಹಾನಿಯಾಗಿದೆ. ಕನ್ಯಾನ ಗ್ರಾಮದ ಪನೆಯಡ್ಕ ನಿವಾಸಿ ಹರಿಣಾಕ್ಷಿ ಗೌಡ ಎಂಬುವವರ ವಾಸ್ತವ್ಯದ ಕಚ್ಚಾಮನೆಗೆ ಮರಬಿದ್ದು ಭಾಗಶಃ ಹಾನಿಯಾಗಿದೆ, ಅಮ್ಮುಂಜೆ ಗ್ರಾಮದ ನೆಫಿಸಾ ಅವರ ಮನೆಗೆ ಭಾಗಶಃ ಹಾನಿಯಾಗಿದೆ.
(more…)