ಬಂಟ್ವಾಳ: ಪಾಣೆಮಂಗಳೂರಿನ ಎಸ್.ಎಲ್.ಎನ್.ಪಿ. ವಿದ್ಯಾಲಯದಲ್ಲಿ 12ನೇ ಅಂತರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ವೈದ್ಯೆ ಮಂಗಳೂರಿನ ಡಾ. ವಿಶಾಖ ಭಟ್ ಯೋಗ ಮತ್ತು ಧ್ಯಾನದಿಂದಾಗುವ ಮಹತ್ವವಿವರಿಸಿದರು.
ಹಿರಿಯ ವಿದ್ಯಾರ್ಥಿನಿ ಕು. ಪ್ರಾಪ್ತಿ ಎಲ್. ಶೆಟ್ಟಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಮುಖ್ಯೋಪಾಧ್ಯಾಯಿನಿ ಶ್ವೇತಾ ಕಾಮತ್ ಮತ್ತು ಪಾಣೆಮಂಗಳೂರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನರೇಂದ್ರನಾಥ ಕುಡ್ವ ಉಪಸ್ಥಿತರಿದ್ದರು.
ನಫೀಸತ್ ಮಿಶ್ರಿಯಾ ಸ್ವಾಗತಿಸಿದರು. ಕೌಶಲ್ ವಂದಿಸಿದರು. ವಿದ್ಯಾಶ್ರೀ ಪಿ.ಎನ್. 10ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶೈಲಜಾ ಬಿ.ರೈ ಕಾರ್ಯಕ್ರಮ ಸಂಯೋಜಿಸಿದರು.