ಕಲ್ಲಡ್ಕ

ಫ್ಲೈಓವರ್ ತಳಭಾಗ ನಿರ್ಬಂಧ, ರಸ್ತೆಯುದ್ದಕ್ಕೂ ಪಾರ್ಕಿಂಗ್!! ಕಲ್ಲಡ್ಕದ ಟಾಪ್ 10 ಸಮಸ್ಯೆಗಳೇನು?

ಮಂಕಾಗಿಬಿಡುತ್ತದೆ ಎಂದು ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ವ್ಯಕ್ತವಾಗಿತ್ತು. ಹತ್ತಾರು ಸಹಕಾರಿ ಸಂಘಗಳು, ವಾಣಿಜ್ಯ ಸಂಕೀರ್ಣಗಳು, ಸಾವಿರಾರು ಮಕ್ಕಳು ಆಗಮಿಸುವ ಶಿಕ್ಷಣ ಸಂಸ್ಥೆಗಳಿರುವ ಕಲ್ಲಡ್ಕ ಪೇಟೆ ಇಂದಿಗೂ ತನ್ನ ಲವಲವಿಕೆ ಉಳಿಸಿಕೊಳ್ಳುವ ಮೂಲಕ ಆ ಮಾತನ್ನು ಸುಳ್ಳಾಗಿಸಿದೆ.

photo kalladka

ಸದ್ಯದ ಸಮಸ್ಯೆಗಳೇ ಬೇರೆ, ಫ್ಲೈಓವರ್ ನಿರ್ಮಾಣವಾಗಿ ಜಾಗವೇನೋ ಹೆಚ್ಚಾಗಿದೆ, ಆದರೆ ಅದರಡಿಯಲ್ಲಿ ಯಾವ ವಾಹನಗಳೂ ನಿಲ್ಲಲು ಅವಕಾಶವಿಲ್ಲದ ಕಾರಣ ರಸ್ತೆಯಲ್ಲೇ ಅಡ್ಡಾದಿಡ್ಡಿ ಪಾರ್ಕಿಂಗ್ ಸಮಸ್ಯೆಗೆ ಕಾರಣವಾಗಿದೆ.

ಈಗ ಹೇಗಿದೆ

ಜಾಹೀರಾತು
photo kalladka

ಕಲ್ಲಡ್ಕದಲ್ಲಿ ಫ್ಲೈಓವರ್ ನಿರ್ಮಾಣಗೊಂಡ ಬಳಿಕ ಅದರಡಿ ರಸ್ತೆಗಿಂತ ಸ್ವಲ್ಪ ಎತ್ತರ ಮಾಡಿ, ಮಣ್ಣು ಹಾಕಲಾಗಿದ್ದು, ಅಲ್ಲಿ ಹೂದೋಟ ನಿರ್ಮಿಸುವ ಇರಾದೆ ಇಲಾಖೆಗಿದೆ. ಬೊಂಡಾಲಕ್ಕೆ ಹೋಗುವ ಬದಿ, ಕೆ.ಸಿ.ರೋಡ್ , ಕಲ್ಲಡ್ಕ ಸರಕಾರಿ ಶಾಲೆಯ ಎದುರು, ವಿಟ್ಲ ಕಡೆಗೆ ತಿರುಗುವ ಜಾಗ,

photo kalladka

ಅಲ್ಲಿಂದ ಸ್ವಲ್ಪ ಮುಂದೆ ಬಸ್ ನಿಲ್ಲುವ ಜಾಗದ ಬಳಿ, ಪೂರ್ಲಿಪ್ಪಾಡಿ ಪ್ರದೇಶದಲ್ಲಿ ಒಟ್ಟು ಆರು ಕಡೆಗಳಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ಫ್ಲೈಓವರ್ ಅಡಿಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಎರಡೂ ಬದಿ ಸರ್ವೀಸ್ ರಸ್ತೆಗಳು ಹೆದ್ದಾರಿ ತಲುಪುವ ಭಾಗದಲ್ಲಿ ಅಗಲಕಿರಿದಾಗುತ್ತವೆ. ಯಾವ ರಸ್ತೆಯೂ ಒನ್ ವೇ ಅಲ್ಲದ ಕಾರಣ ಎರಡೂ ಕಡೆಯಿಂದ ವಾಹನ ಓಡಾಡಲು ಅವಕಾಶವಿದೆ. ಆದರೆ ರಸ್ತೆಯ ಎರಡೂ ಬದಿ ವಾಹನಗಳ ಪಾರ್ಕಿಂಗ್ ಅಪಾಯಕಾರಿಯಾಗಿ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಕಲ್ಲಡ್ಕ ಪೇಟೆಯ ಹತ್ತು ಸಮಸ್ಯೆಗಳು

VNR GOLD

==============

photo kalladka
  1. ಹೆದ್ದಾರಿ ಪ್ರಾಧಿಕಾರ ಬಸ್ ನಿಲ್ದಾಣ ನಿರ್ಮಿಸಿದ ಜಾಗದಲ್ಲಿ ಬಸ್ಸುಗಳು ನಿಲ್ಲುವುದಿಲ್ಲ.
  2. ಹಿಂದೆ ಸರಕಾರಿ ಶಾಲೆಗೆ ತಿರುಗುವ ಜಾಗದಲ್ಲಿ ಕೆಎಸ್ಸಾರ್ಟಿಸಿ ಬಸ್ಸುಗಳ ನಿಲುಗಡೆ ಇತ್ತು. ಈಗ ಅಲ್ಲಿ ಬಸ್ ನಿಲುಗಡೆ ಸರಿಯಾಗಿ ಆಗುತ್ತಿಲ್ಲ.
  3. ದಿನವಹಿ ನೂರಾರು ಸಾರ್ವಜನಿಕ ಉಪಯೋಗಿ ವಾಹನಗಳು (ಆಟೊ, ಗೂಡ್ಸ್ ಟೆಂಪೊ) ಬರುತ್ತವೆ. ಅವುಗಳಿಗೆ ಸಮರ್ಪಕ ಪಾರ್ಕಿಂಗ್ ಜಾಗ ಈಗಿಲ್ಲ.
  4. ಫ್ಲೈಓವರ್ ನೆರಳಲ್ಲಿ ರಸ್ತೆಯಲ್ಲೇ ಘನ ವಾಹನಗಳನ್ನೂ ನಿಲ್ಲಿಸಲಾಗುತ್ತಿದೆ. ರಾತ್ರಿ ವೇಳೆ ವಿದ್ಯುತ್ ದೀಪಗಳೂ ಇರದೆ ಸಮಸ್ಯೆ ಉಂಟಾಗುತ್ತಿದೆ.
  5. ವಾಹನಗಳನ್ನು ಒಂದೇ ಸಾಲಿನಲ್ಲಿ ಪಾರ್ಕ್ ಮಾಡುವ ಬದಲು ಒಟ್ಟಾರೆಯಾಗಿ ನಿಲ್ಲಿಸಲಾಗುತ್ತಿದೆ. ಇದು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
  6. ಬೆಳಗ್ಗೆ ರಸ್ತೆಯಲ್ಲೇ ವಾಹನ ನಿಲ್ಲಿಸಿ, ಸಂಜೆ ಬಂದು ತೆಗೆದುಕೊಂಡು ಹೋಗುವವರು ಹೆಚ್ಚಾಗಿದ್ದಾರೆ. ಅದೂ ಫ್ಲೈಓವರ್ ನೆರಳಲ್ಲೇ ನಿಲ್ಲಿಸುತ್ತಾರೆ. ಇದರ ಬದಲು ಫ್ಲೈಓವರ್ ನಡಿಯೇ ನಿಲ್ಲಿಸಬಹುದಿತ್ತು.
  7. ರಸ್ತೆ ಪಕ್ಕದ ಚರಂಡಿಗಳಲ್ಲಿ ಕೆಸರು ತುಂಬಿಕೊಂಡಿದ್ದು, ಹೂಳೆತ್ತಿಲ್ಲ. ಕೆಲವೊಮ್ಮೆ ಸ್ಲ್ಯಾಬ್ ಗಳು ಎತ್ತರ ತಗ್ಗು ಇದ್ದು, ಅಪಾಯಕಾರಿಯಾಗಿದೆ.
  8. ಸರ್ವೀಸ್ ರಸ್ತೆಗಳ ಸನಿಹದಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಹೋಗುವ ಸಂಪರ್ಕ ರಸ್ತೆಗಳಿಗೆ ಕಾಂಕ್ರೀಟ್ ಮಾಡಿಲ್ಲ. ಇದು ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ, ರಸ್ತೆ ಕಾಂಕ್ರೀಟ್ ಸಂದರ್ಭ ಸರಿಯಾದ ಫಿನಿಶಿಂಗ್ ಮಾಡಿಲ್ಲ.
  9. ವಿಟ್ಲಕ್ಕೆ ತೆರಳುವ ಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಯಾವಾಗ ದುರಸ್ತಿಯಾಗುತ್ತದೋ ಗೊತ್ತಿಲ್ಲ ಎಂಬಂತಿದೆ.
  10. ಬಸ್ ಪ್ರಯಾಣಿಕರಿಗೆ ಸರಿಯಾದ ಸೂರು ಇರುವ ತಂಗುದಾಣ ಬೇಕು, ಪ್ರಸ್ತುತ ಪಾರ್ಕ್ ಮಾಡಿದ ವಾಹನಗಳ ಎಡೆಯಲ್ಲಿ ಕಾಯುವ ಪರಿಸ್ಥಿತಿ ಇದೆ.
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts