ಬಂಟ್ವಾಳ: ಪ್ರಸ್ತಾವಿತ ಖಾಸಗೀಕರಣವನ್ನು ವಿರೋಧಿಸಿ ಬಂಟ್ವಾಳ ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ನೌಕರರು GATE ಮೀಟಿಂಗ್ (ದ್ವಾರಸಭೆ) ನಡೆಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಒಕ್ಕೂಟ, ಕೆಇಬಿ ನೌಕರರ ಸಂಘ, MESCOM ಇಂಜಿನಿಯರುಗಳ ಸಂಘ ಸಹಿತ ನಾನಾ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ನಾಯಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಮೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷ ಶಂಕರ್ ಪ್ರಕಾಶ್ ರವರು ಮಾತನಾಡಿ ಅಧಿಕಾರಿ, ನೌಕರರು ಖಾಸಗಿಕರಣವನ್ನು ವಿರೋಧಿಸಿ ಯಾವ ರೀತಿ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು. ಕೇಂದ್ರ ಸಮಿತಿ ಸದಸ್ಯರಾದ ಕರಿಬಸಪ್ಪ ಎಮ್.ಎಸ್ ಮಾತನಾಡಿ ಈ ಖಾಸಗಿಕರಣದ ವಿರುದ್ದ ಅಧಿಕಾರಿ, ನೌಕರರು ಒಟ್ಟಾಗುವಂತೆ ತಿಳಿಸಿದರು. ಡಿಪ್ಲೋಮ ಇಂಜಿನಿಯರ್ ಸಂಘದ ರಾಜ್ಯಾಧ್ಯಕ್ಷ ರಾಮಚಂದ್ರ ಮಾತನಾಡಿ ಅಧಿಕಾರಿ, ನೌಕರರು ಇನ್ನು ಹೆಚ್ಚಿನ ಶಿಸ್ತಿನಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರ ಪ್ರೀತಿ ಗಳಿಸಬೇಕು ಎಂದರು.
ಸಂಘಟನ ಕಾರ್ಯದರ್ಶಿ ಷಣ್ಮುಖಪ್ಪ ಬಾವಿ ಮತ್ತು ಕೇಂದ್ರ ಸಮಿತಿ ಸದಸ್ಯರಾದ ರಾಜೇಶ್, ಗಿರೀಶ್ , ಭಾಸ್ಕರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರುಗಳಾದ ನಾರಾಯಣ್.ಜಿ, ಸುಬ್ರಮಣ್ಯ ಪ್ರಸಾದ್ ಬಿ.ಜಿ , ಭವತಾರಿಣಿ, ಕ.ವಿ.ಪ್ರ.ನಿ ನೌಕರರ ಸಂಘ ಕೇಂದ್ರ ಸಮಿತಿ ಸದಸ್ಯರಾದ ರಾಜೇಶ್.ಬಿ, ಭಾಸ್ಕರ್ ಹಾಗೂ ಬಂಟ್ವಾಳ ವಿಭಾಗದ ಅಧಿಕಾರಿ ಮತ್ತು ನೌಕರರು ಭಾಗವಹಿಸಿ ಖಾಸಗೀಕರಣದ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದರು. ಬಂಟ್ವಾಳ ವಿಭಾಗದ ಸ್ಥಳೀಯ ಸಮಿತಿ, ಪ್ರಾರ್ಥಮಿಕ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿಭಾಗ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು ಮತ್ತು ಎಲ್ಲಾ ಶಾಖಾಧಿಕಾರಿಗಳು ಹಾಗೂ ಎಲ್ಲಾ ಅಧಿಕಾರಿ, ನೌಕರರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಿದ್ದರಾಜ್ ನಿರೂಪಿಸಿದರು. ಲೊಕೇಶ್ ವಂದಿಸಿದರು.