ಬಂಟ್ವಾಳ ತಾಲೂಕಿನ ಮುಖ್ಯ ಕೇಂದ್ರವಾದ ಬಿ.ಸಿ.ರೋಡಿನಲ್ಲಿ ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿದ್ದ ಫ್ಲೆಕ್ಸ್ ಅಬ್ಬರಕ್ಕೆ ಗುರುವಾರ ಕಡಿವಾಣ ಬಿದ್ದಿದೆ.
ಬಿ.ಸಿ.ರೋಡ್ ಅಲ್ಲದೆ, ಬಂಟ್ವಾಳ, ಪಾಣೆಮಂಗಳೂರು, ಮೆಲ್ಕಾರ್ ಸಹಿತ ಪುರಸಭಾ ವ್ಯಾಪ್ತಿಯ ಆಯಕಟ್ಟಿನ ಜಾಗದಲ್ಲಿ ರಾರಾಜಿಸುತ್ತಿದ್ದ ಎತ್ತರದ ಕಟೌಟ್ ಗಳನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಬುಧವಾರ ನೀಡಿದ ಆದೇಶದ ಹಿನ್ನೆಲೆಯಲ್ಲಿ ತೆರವು ಮಾಡುವ ಪ್ರಕ್ರಿಯೆ ಗುರುವಾರ ನಡೆಯಿತು