ಬಂಟ್ವಾಳ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿರುವ ಲಿಫ್ಟ್ ಉದ್ಘಾಟನೆ ದಿನ ಕಳೆದು ಕೆಲವೇ ದಿನಗಳಲ್ಲಿ ಕೈಕೊಟ್ಟು ಸಾರ್ವಜನಿಕರು ತೊಂದರೆ ಅನುಭವಿಸಿದ್ದ ಘಟನೆಯನ್ನು ನೆನಪಿಸುವ ಅಂಥದ್ದೇ ಒಂದು ಪ್ರಕರಣ ಗುರುವಾರ ಮಧ್ಯಾಹ್ನ ನಡೆಯಿತು.
ಮಧ್ಯಾಹ್ನ ಸುಮಾರು 12.45ಕ್ಕೆ ಕೆಲಸ ಕಾರ್ಯಗಳ ನಿಮಿತ್ತ ಪ್ರವೇಶಿಸಿದ್ದ ಇಬ್ಬರು ಸಾರ್ವಜನಿಕರು ಸುಮಾರು 1.30ವರೆಗೆ ಲಿಫ್ಟ್ ಕೆಟ್ಟು ಬಾಕಿಯಾದರು. ಕೊನೆಗೆ ಸಾರ್ವಜನಿಕರು ಸೇರಿ ತಮಗೆ ತೋಚಿದ ವಿಧಾನವನ್ನೆಲ್ಲಾ ಬಳಸಿ ಲಿಪ್ಟ್ ನಿಂದ ಹೊರಬರುವಂತೆ ಮಾಡಿ ಜೀವ ಉಳಿಸಿದ್ದಾರೆ. ಹಿರಿಯರು ,ಮಕ್ಕಳ ಸಹಿತ ಇತರ ಅನಾರೋಗ್ಯ ಪೀಡಿತ ವ್ಯಕ್ತಿಗಳು ಈ ಲಿಪ್ಟ್ ನಲ್ಲಿ ಹೋಗಿ ಬಾಕಿಯಾದರೆ ಉಸಿರು ಕಟ್ಟಿ ಜೀವಕ್ಕೆ ಅಪಾಯವಾಗುವುದು ನಿಶ್ಚಿತ. ಹಾಗಾಗಿ ಇಂತಹ ಲಿಪ್ಟ್ ನ ಬಗ್ಗೆ ಇಲಾಖೆ ಎಚ್ಚೆತ್ತಕೊಂಡು ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಲಿಪ್ಟ್ ನೊಳಗೆ ಬಂದಿಯಾಗಿದ್ದವರು ತಿಳಿಸಿದರು.