ಬಂಟ್ವಾಳ: ಶಿವಗಿರಿ ಮಹಿಳಾ ಸಹಕಾರ ಸಂಘ ಮೆಲ್ಕಾರ್ ಪಾಣೆಮಂಗಳೂರು ಇದರ ಆಡಳಿತ ಮಂಡಳಿ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಜಯಂತಿ ವಿ.ಪೂಜಾರಿ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪುಷ್ಪಾವತಿ ಶ್ರೀನಿವಾಸ್, ನಿರ್ದೇಶಕರಾಗಿ ಅಭಿನಯ ಚಿದಾನಂದ, ಜ್ಯೋತಿಲಕ್ಷ್ಮೀ ರಾಜೇಶ್, ವನಿತಾ ಕೂಸಪ್ಪ, ತುಳಸಿ ಪುರಂದರ, ಶ್ವೇತಾ ಡಿ. ಪೂಜಾರಿ, ಧನಲಕ್ಷ್ಮೀ ಮಿಥುನ್, ಪ್ರಮೀಳಾ ಮನೋಜ್, ವಿನೋದಾ ಆನಂದ ಪೂಜಾರಿ ಅವರು ಮುಂದಿನ ಐದು ವರ್ಷಗಳಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.