ಬಂಟ್ವಾಳ: ಉದ್ಯಮಿ ಸಾಮಾಜಿಕ ಕಾರ್ಯಕರ್ತ ತಾರಾನಾಥ ಕೊಟ್ಟಾರಿ ಅವರು ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೇ.18 ರಂದು ಬಿ.ಸಿ.ರೋಡು ಕೈಕಂಬ ದ್ವಾರದಲ್ಲಿರುವ ಅಕ್ಷಯ ಸೌಧ ಅಕ್ಷಯ ಸಭಾಂಗಣದಲ್ಲಿ ಪದ ಪ್ರಧಾನ ಸಮಾರಂಭ ನಡೆಯಲಿದೆ. ಬಿ.ಸಿ.ರೋಡಿನ ಉದ್ಯಮಿ ಐತ್ತಪ್ಪ ಆಳ್ವ ಸುಜೀರುಗುತ್ತು ಮುಖ್ಯ ಅತಿಥಿಯಾಗಿ, ರಾಷ್ಟ್ರೀಯ ಉಪಾಧ್ಯಕ್ಷೆ ಅಕ್ಷತಾ ಆರ್. ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ನೇತ್ರಾವತಿ ಸಂಗಮದ ನಿಕಟಪೂರ್ವ ಅಧ್ಯಕ್ಷ ಆದಿರಾಜ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯದರ್ಶಿಯಾಗಿ ರೇಖಾ ರಾವ್, ಜೊತೆ ಕಾರ್ಯದರ್ಶಿಯಾಗಿ ಸನ್ಮತಿ ಜೈನ್ ಇಂದ್ರ, ಕೋಶಾಧಿಕಾರಿಯಾಗಿ ಪಿ. ಮೊಹಮ್ಮದ್, ಉಪಾಧ್ಯಕ್ಷರಾಗಿ ಪುರುಷೋತ್ತಮ ಕೊಟ್ಟಾರಿ, ಜಯಗಣೇಶ ದಾಸಕೋಡಿ, ನಿರ್ದೇಶಕರಾಗಿ ಜಯಾನಂದ ಪೆರಾಜೆ, ಡಾ. ಆನಂದ ಬಂಜನ್ ಪದಾಧಿಕಾರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರನ್ನು ,ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ನೂತನ ಸದಸ್ಯರಾಗಿ ರಾಜಾರಾಮ ಐತಾಳ್, ಗ್ರೇಸಿ ಮೇಬಲ್ ಲಸ್ರಾದೊ , ಅಶೋಕ್ ಕುಮಾರ್ ಬರಿಮಾರು, ಗಿರಿಧರ ಗೌಡ, ಶೋಭಾ ಶೆಟ್ಟಿ, ಪ್ರಮೀಳ ಮಾಣೂರು ಸೇರ್ಪಡೆಗೊಳ್ಳಲಿದ್ದಾರೆ.