ಬಂಟ್ವಾಳ ತಾಲೂಕಿನ ವಿಟ್ಲ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ವಿಟ್ಲ ಪಟ್ಟಣ ಪಂಚಾಯತ್ ವಾರ್ಡ್- 4 ರ ಮಹಿಳಾ ಮಂಡಲ ಅಂಗನವಾಡಿ, ವಿಟ್ಲ ಪಟ್ಟಣ ಪಂಚಾಯತ್ ವಾರ್ಡ್ 2ರ ಚಂದಳಿಕೆ ಅಂಗನವಾಡಿ, ವಿಟ್ಲ ಪಟ್ಟಣ ಪಂಚಾಯತ್ ವಾರ್ಡ್ -2ರ ಉಕ್ಕುಡ ಅಂಗನವಾಡಿ, ಮಂಚಿ ಗ್ರಾಮ ಪಂಚಾಯತ್‌ನ ಕುಕ್ಕಾಜೆ-1 ಅಂಗನವಾಡಿ, ವೀರಕಂಭ ಗ್ರಾಮ ಪಂಚಾಯತ್‌ನ ಮಂಗಿಲಪದವು ಅಂಗನವಾಡಿ, ಕೊಳ್ನಾಡು ಗ್ರಾಮ ಪಂಚಾಯತ್‌ನ ಸೇರ್ಕಳ ಅಂಗನವಾಡಿ, ಅಳಿಕೆ ಗ್ರಾಮ ಪಂಚಾಯತ್‌ನ ಭೀಮಾರ ಅಂಗನವಾಡಿ, ಕೆದಿಲ ಗ್ರಾಮ ಪಂಚಾಯತ್‌ನ ಗಡಿಯಾರ ಅಂಗನವಾಡಿ, ಕನ್ಯಾನ ಗ್ರಾಮ ಪಂಚಾಯತ್‌ನ ಕಣಿಯೂರು ಅಂಗನವಾಡಿ ಕೇಂದ್ರದ ಕಂಕ್ರಷ್ ಕಾರ್ಯಕರ್ತೆ ಹಾಗೂ ಕಂಕ್ರಷ್ ಸಹಾಯಕಿ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕಂಕ್ರಷ್ ಕಾರ್ಯಕರ್ತೆಯರ ಮಾಸಿಕ ಗೌರವಧನ ರೂ.5500 ಹಾಗೂ ಕಂಕ್ರಷ್ ಸಹಾಯಕಿಯರ ಮಾಸಿಕ ಗೌರವಧನ ರೂ.3000 ಆಗಿರುತ್ತದೆ. ದಿನಾಂಕ:30-05-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಸೂಕ್ತ ದಾಖಲೆಗಳೊಂದಿಗೆ ಅದೇ ಅಂಗನವಾಡಿ ಸರ್ವೇ ವ್ಯಾಪ್ತಿಯ 18 ರಿಂದ 35 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸತಕ್ಕದ್ದು.
ಅಂಗನವಾಡಿ ಕಂಕ್ರಷ್‌ನ ಕಾರ್ಯಕರ್ತೆ ಹುದ್ದೆಗೆ ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಈ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ಲಭ್ಯವಿಲ್ಲದೇ ಇದ್ದಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿದವರನ್ನು ಪರಿಗಣಿಸಲಾಗುವುದು. ಕಂಕ್ರಷ್ ಕರ್ಯ ಕರ್ತೆ ಹಾಗೂ ಕಂಕ್ರಷ್ ಸಹಾಯಕಿ ಹುದ್ದೆಗೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಂಗನವಾಡಿ ಕೇಂದ್ರವಿರುವ ವಾರ್ಡಿನಲ್ಲಿಯೇ ವಾಸ್ತವ್ಯವಿರಬೇಕು. 6 ತಿಂಗಳೊಳಗೆ ಪಡೆದಿರುವ ತಹಶೀಲ್ದಾರರ ವಾಸ್ತವ್ಯ ದೃಢಪತ್ರ ಹೊಂದಿರಬೇಕು. ಹಾಗೂ ಕಂಕ್ರಷ್ ಸಹಾಯಕಿ ಹುದ್ದೆಗೆ ಕರ್ನಾಟಕ ರಾಜ್ಯದ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಈ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ಲಭ್ಯವಿಲ್ಲದೇ ಇದ್ದಲ್ಲಿ 7ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರನ್ನು ಪರಿಗಣಿಸಲಾಗುವುದು. ಹೆಚ್ಚಿನ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ. ಜೆರಾಕ್ಸ್ ಪ್ರತಿಗಳಿಗೆ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿರಬೇಕು. ಜನ್ಮದಿನಾಂಕಕ್ಕೆ ಸಂಬಂಧಿಸಿದಂತೆ ಜನನ ಪ್ರಮಾಣ ಪತ್ರ ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಯಾವುದಾದರೂ ಗುರುತು ಚೀಟಿ ಸಲ್ಲಿಸಬೇಕು(ಆಧಾರ್ ಕಾರ್ಡ್, ವೋಟರ್ ಐಡಿ, ಇತ್ಯಾದಿ) ಹಾಗೂ ಸರ್ವೆ ವ್ಯಾಪ್ತಿಯಲ್ಲಿ ವಾಸವಾಗಿರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯಿಂದ ದೃಢೀಕರಣವವನ್ನು ಲಗತ್ತಿಸಬೇಕು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಟ್ಲ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಕುಲಾಲ ರಜತ ಭವನ ಕಟ್ಟಡ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಬಳಿ, ವಿಟ್ಲ ಅಂಚೆ ದೂರವಾಣಿ ಸಂಖ್ಯೆ: 08255-238080 ಇವರನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಿಟ್ಲ ಇವರು ತಿಳಿಸಿರುತ್ತಾರೆ.