ಬ್ರಹ್ಮರಕೂಟ್ಲುವಿನಲ್ಲಿರುವ ಟೋಲ್ ಗೇಟ್ ತೆರವು ಹೋರಾಟ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಜನಾಂದೋಲನ ನಡಿಗೆ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಬ್ರಹ್ಮರಕೂಟ್ಲು ಟೋಲ್ ಗೇಟ್ ವರೆಗೆ ಏ.28ರ ಮಂಗಳವಾಠ ಸಂಜೆ ನಡೆಯಿತು.
ಈ ಸಂದರ್ಭ, ಮಾತನಾಡಿದ ರಮಾನಾಥ ರೈ, ಬ್ರಹ್ಮರಕೂಟ್ಲುವಿನಲ್ಲಿರುವ ಟೋಲ್ ಅವೈಜ್ಞಾನಿಕವಾಗಿದ್ದು, ಇದನ್ನು ತೆರವುಗೊಳಿಸುವವರೆಗೂ ನಾನಾ ರೀತಿಯ ಹೋರಾಟ ನಡೆಸುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯ ಜನಜಾಗೃತಿಗಾಗಿ ಜನಾಂದೋಲನ ನಡಿಗೆ ಮಾಡಿರುವುದಾಗಿ ಅವರು ಹೇಳಿದರು.
ಮಾಜಿ ಸಚಿವ ಬಿ.ಅಭಯಚಂದ್ರ ಜೈನ್, ಸಮಾನ ಮನಸ್ಕ ಸಮನ್ವಯ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ, ಪ್ರಮುಖರಾದ ಮುನೀರ್ ಕಾಟಿಪಳ್ಳ, ಸೊಹೈಲ್ ಕಂದಕ್, ಬಿ.ಶೇಖರ್, ಪಿಯೂಸ್ ಎಲ್. ರೋಡ್ರಿಗಸ್, ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಕೆ.ಸಂಜೀವ ಪೂಜಾರಿ, ಇಬ್ರಾಹಿಂ ನವಾಝ್, ಶಬೀರ್ ಸಿದ್ದಕಟ್ಟೆ, ಬಿ.ಎಂ.ಅಬ್ಬಾಸ್ ಆಲಿ, ಮಮತಾ ಗಟ್ಟಿ, ಬಿ.ಎಂ. ಭಟ್, ಸುರೇಶ್ ಕುಮಾರ್, ಉಮ್ಮರ್ ಕುಂಞ ಸಾಲೆತ್ತೂರು, ಪದ್ಮನಾಭ ರೈ, ಸುದೀಪ್ ಶೆಟ್ಟಿ ಮಾಣಿ ಸಹಿತ ವಿವಿಧ ಮುಖಂಡರು, ಜಿಪಂ, ತಾಪಂ, ನಗರಸಭೆ, ಪುರಸಭೆಯ ಮಾಜಿ ಸದಸ್ಯರು, ನಾನಾ ತಾಲೂಕುಗಳ ಪ್ರಮುಖರು ಉಪಸ್ಥಿತರಿದ್ದರು. ಕಾಲ್ನಡಿಗೆ ಬಿ.ಸಿ.ರೋಡಿನಿಂದ ಆರಂಭಗೊಂಡು, ಟೋಲ್ ವರೆಗೆ ಸಾಗುವವರೆಗೆ ಹಲವು ಮುಖಂಡರು ಜತೆಗೂಡಿದರು.