ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಯಾಗದಂತೆ ಕಾಂಗ್ರೆಸ್ ತಡೆದಿದೆ ಎಂದು ಆರೋಪಿಸಿ, ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜನಾಕ್ರೋಶ ಸಭೆ ಬಿ.ಸಿ.ರೋಡಿನಲ್ಲಿ ಸೋಮವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡಿದೆ, ಮಹಿಳಾ ಮಸೂದೆ ಜಾರಿಯಾಗದಂತೆ ವಿರೋಧ ವ್ಯಕ್ತಪಡಿಸುವ ಕಾಂಗ್ರೆಸ್ ಜಿಲ್ಲೆಯಲ್ಲಿ ಎಷ್ಟು ಸೀಟು ನೀಡಿದೆ ಎಂದು ಪ್ರಶ್ನಿಸಿದರು. ಮಹಿಳಾ ಮೀಸಲಾತಿ ಜಾರಿ ಮಾಡುವ ಮೂಲಕ ಬದಲಾವಣೆ ಬಯಸಿದ ದೇಶದ ಜನರಿಗೆ ಕಾಂಗ್ರೆಸ್ ನಡೆ ಬೇಸರ ಮೂಡಿಸಿದೆ ಎಂದರು.
ನಾಯಕಿ ಸುಲೋಚನ ಜಿ.ಕೆ.ಭಟ್, ಹಾಗೂ ಬಿಜೆಪಿ ಬಂಟ್ವಾಳ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಬಂಟ್ವಾಳ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಶೆಟ್ಟಿ, ಪ್ರಮುಖರಾದ ವಿಕಾಸ್ ಪುತ್ತೂರು, ತುಂಗಪ್ಪ ಬಂಗೇರ, ಶಿವಪ್ರಸಾದ್ ಶೆಟ್ಟಿ, ದಿನೇಶ್ ಭಂಡಾರಿ, ಗೋವಿಂದ ಪ್ರಭು, ದೇವಪ್ಪ ಪೂಜಾರಿ, ರಾಮ್ ದಾಸ ಬಂಟ್ವಾಳ, ಜನಾರ್ದನ ಬೊಂಡಾಲ, ಆನಂದ ಶಂಭೂರು, ತನಿಯಪ್ಪ ಗೌಡ, ಹರೀಶ್ ಶೆಟ್ಟಿ ಪಡು, ಜಿನರಾಜ ಕೋಟ್ಯಾನ್,ಪ್ರಣಾಮ್ ಅಜ್ಜಿಬೆಟ್ಟು, ಕಮಲಾಕ್ಷಿ ಪೂಜಾರಿ, ನಳಿನಿ ಶೆಟ್ಟಿ, ರೇಷ್ಮಾ ಶಂಕರಿ, ಸೀಮಾ ಮಾದವ, ಲಖಿತಾ ಆರ್ ಶೆಟ್ಟಿ, ಬಬಿತಾ ಆರ್ ಕೋಟ್ಯಾನ್, ಹರ್ಷಿಣಿ ಪುಷ್ಪಾನಂದ, ಮಂದಾರತಿ ಶೆಟ್ಟಿ, ಜಯಂತಿ, ಶ್ರೀಲತಾ ಸಹಿತ ಪ್ರಮುಖರು ಉಪಸ್ಥಿತರಿದ್ದರು.