ಬಂಟ್ವಾಳದಲ್ಲಿ ನಡೆದ 28 ನೆಯ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಸರ್ವ ರೀತಿಯಲ್ಲಿ ಯಶಸ್ಸು ಕಂಡು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹೇಳಿದರು.
ಬಂಟ್ವಾಳದ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದಿದ್ದ 28 ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಕೃತಜ್ಞತಾ ಮತ್ತು ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಂಟ್ವಾಳದಲ್ಲಿ ತನ್ನ ಅವಧಿಯಲ್ಲಿ ನಡೆದ ಯಾವುದೇ ಸಾಹಿತ್ಯ ಸಮ್ಮೇಳನವು ಹಣಕಾಸಿನ ಕೊರತೆಯನ್ನು ಕಾಣದೆ ವಿಭಿನ್ನವಾಗಿ, ವಿಶಿಷ್ಠವಾದ ರೀತಿಯಲ್ಲಿ ಎಲ್ಲೆಡೆ ಮಾದರಿಯಾಗುವಂತೆ ನಡೆದುಕೊಂಡು ಬಂದಿದೆ.ಈ ಹಿಂದೆ ಅಮ್ಮುಂಜೆ ಮತ್ತು ಮಂಚಿಯಲ್ಲಿ ನಡೆದ ಸಮ್ಮೇಳನಗಳೂ ಯಾವುದೇ ಲೋಪಗಳಿಲ್ಲದೆ ನಡೆದಿರುವುದನ್ನು ಉಲ್ಲೇಖಿಸಿ, ಈ ಬಾರಿಯ ಜಿಲ್ಲಾ ಸಮ್ಮೇಳನವೂ ಎಲ್ಲಕ್ಕಿಂತ ಮಿಗಿಲು ಎನ್ನುವಂತೆ ಎಲ್ಲ ವರ್ಗದವರಿಗೂ ಮೆಚ್ಚುಗೆಯಾಗುವಂತೆ ಮೂರು ದಿನಗಳ ಕಾಲ ನಡೆಯಿತು.ಇದಕ್ಕಾಗಿ ಶ್ರಮಿಸಿದ ಸ್ವಾಗತ ಸಮಿತಿ,ಜಿಲ್ಲಾ ಸಮಿತಿ ಮತ್ತು ಬಂಟ್ವಾಳ ಕಸಾಪ ಘಟಕ ಹಾಗೂ ಆರ್ಥಿಕ ಮತ್ತು ತನು ಮನದ ಸಹಕಾರ ನೀಡಿದ ಬಂಟ್ವಾಳದ ಸರ್ವ ನಾಗರಿಕರಿಗೆ,ಕನ್ನಡಾಭಿಮಾನಿಗಳಿಗೆ ಅಭಿನಂದನೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸಬೇಕಾದ್ದು ನಮ್ಮ ಕರ್ತವ್ಯವಾಗುತ್ತದೆ ಎಂದರು.
ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ರಾಜೇಶ್ವರಿ, ಸ್ವಾಗತ ಸಮಿತಿಯ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಪುತ್ತೂರು ಕಸಾಪ ಘಟಕದ ಅಧ್ಯಕ್ಷ ಉಮೇಶ್ ನಾಯಕ್,ಸ್ವಾಗತ ಸಮಿತಿಯ ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಉದಯ್ ಬಂಟ್ವಾಳ ಕಸಾಪ ಗೌರವ ಪ್ರಧಾನ ಕಾರ್ಯದರ್ಶಿ ವಿ.ಸು.ಭಟ್, ಬಂಟ್ವಾಳ ಕಸಾಪ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಡಿ.ಬಿ.ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮ್ಮೇಳನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಅಮ್ಮುಂಜೆ ಅವರನ್ನು ಜಿಲ್ಲಾ ಕಸಾಪ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಬೆಳ್ತಂಗಡಿ ಕಸಾಪ ಅಧ್ಯಕ್ಷ ಯದುಪತಿ ಗೌಡ, ಬಂಟ್ವಾಳ ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಮೂಡಬಿದಿರೆ ಕಸಾಪ ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಕಲಾವಿದ ಎಚ್.ಕೆ.ನಯನಾಡ್, ಸ್ವಾಗತ ಸಮಿತಿ ಕಾರ್ಯದರ್ಶಿ ದೇವಪ್ಪ ಕುಲಾಲ್, ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ಮಹಮ್ಮದ್ ಪಾಣೆಮಂಗಳೂರು, ಜಿಲ್ಲಾ ಸದಸ್ಯ ಪೂವಪ್ಪ ನೇರಳಕಟ್ಟೆ, ಅಬ್ಬಾಸ್ ಅಲಿ, ಜಯರಾಮ ಪಡ್ರೆ, ಸತೀಶ್ ಕಾರ್ತಿಕ್, ಸನತ್ ಕುಮಾರ್ ಜೈನ್, ಜನಾರ್ದನ ಅಮ್ಮುಂಜೆ, ಮೋಹನ್ ಸಾಲಿಯಾನ್ ಬೆಂಜನಪದವು, ನಾರಾಯಣ ಬಡಕಬೈಲು, ರಜನಿ ಚಿಕ್ಕಯಮಠ, ಸನ್ಮತಿ ಜೈನ್, ಗೀತಾ ಕೊಂಕೋಡಿ ಮತ್ತಿತರರು ಉಪಸ್ಥಿತರಿದ್ದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…