ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ನಡೆಯಿತು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳ, ಪಶುವೈದ್ಯ ಆಸ್ಪತ್ರೆ ಕಲ್ಲಡ್ಕ ಮತ್ತು ವೀರಕಂಭ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮ ಶಿಬಿರ ನಡೆಯಿತು.
ಒಟ್ಟು ಸುಮಾರು 18 ಕೇಂದ್ರಗಳಲ್ಲಿ ಸುಮಾರು 200 ಕ್ಕೂ ಅಧಿಕ ನಾಯಿಗಳಿಗೆ ಲಸಿಕೆಯನ್ನುನೀಡಲಾಯಿತು.ಕಲ್ಲಡ್ಕ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕಾರ್ತಿಕ್ , ಜಾನುವಾರು ಅಧಿಕಾರಿ ಮಂದಾರ, ಹಿರಿಯ ಪಶುವೈದ್ಯಕೀಯ ನಿರೀಕ್ಷಕ ಶೀನಪ್ಪ, ವೀರಕಂಭ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ, ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೊಳಿಮಾರ್, ಪಂಚಾಯತ್ ಸದಸ್ಯರುಗಳಾದ ದಿನೇಶ್ ಪೂಜಾರಿ, ಸಿಬ್ಬಂದಿಗಳಾದ ಚಂದ್ರಹಾಸ್, ಮಿಥುನ್, ವಿನುತ, ದಿವ್ಯಜ್ಯೋತಿ, ಪಶು ಸಖಿ ಪ್ರಚೀನಾ ಉಪಸ್ಥಿತರಿದ್ದರು