ಬಂಟ್ವಾಳ: ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಬಿ.ಮೂಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಿ.ಮೂಡ ಸರಕಾಋಇ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಒಟ್ಟು ಏಳು ಬಹುಮಾನಗಳನ್ನು ಪಡೆದುಕೊಂಡು ಅತ್ಯುತ್ತಮ ಸಾಧನೆ ತೋರಿದ್ದಾರೆ.
ಕಿರಿಯ ವಿಭಾಗದಲ್ಲಿ 3ನೇ ತರಗತಿಯ ಚಿತ್ರಾಲಿ ಚಿತ್ರಕಲೆ ತೃತೀಯ ಸ್ಥಾನ, ನಾಲ್ಕನೇ ತರಗತಿಯ ಸಮರ್ಥ್ ಅಭಿನಯ ಗೀತೆಯಲ್ಲಿ ದ್ವಿತೀಯ ಸ್ಥಾನ ಮತ್ತು ದೇಶಭಕ್ತಿ ಗೀತೆ ಯಲ್ಲಿ ತೃತೀಯ ಸ್ಥಾನ, ಹಿರಿಯ ವಿಭಾಗದಲ್ಲಿ ಏಳನೇ ತರಗತಿಯ ಆನಂದ್ ಆಶುಭಾಷಣ ಪ್ರಥಮ ಸ್ಥಾನ, 6ನೇ ತರಗತಿಯ ವಿಭಾ ಕವನವಾಚನದಲ್ಲಿ ದ್ವಿತೀಯ ಸ್ಥಾನ, ಯಜ್ಞಶ್ರೀ –ಧಾರ್ಮಿಕ ಪಠಣ ದ್ವಿತೀಯ ಸ್ಥಾನ, ಏಳನೇ ತರಗತಿಯ ಹರ್ಷಿಣಿ ಕನ್ನಡ ಕಂಠಪಾಠ ತೃತೀಯ ಸ್ಥಾನ ಗಳಿಸಿದ್ದಾರೆ.