ಬಂಟ್ವಾಳ: ಸರಿದಂತರ ಪ್ರಕಾಶನ, ಮೊಡಂಕಾಪು ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬಂಟ್ವಾಳ ಹಾಗೂ ಹಿರಿಯರ ಸೇವಾ ಪ್ರತಿಷ್ಠಾನ(ರಿ), ಬಂಟ್ವಾಳ ಸಂಯುಕ್ತ ಆಶ್ರಯದಲ್ಲಿ ಮನೆ ಮನೆ ಗಮಕ ಸರಣಿಯ ಅಂಗವಾಗಿ, ಪ್ರೊ. ರಾಜಮಣಿ ರಾಮಕುಂಜ ಅವರ ಮನೆ ‘ಶಮ್ಯಾಪ್ರಾಸ’ದಲ್ಲಿ ಜುಲೈ 27ರಂದು ಸಂಜೆ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.
ಗಮಕಿ ಮಂಜುಳಾ ಸುಬ್ರಹ್ಮಣ್ಯ ಗಮಕ ವಾಚನ ಮಾಡಿ, ಪ್ರೊ. ರಾಜಮಣಿ ರಾಮಕುಂಜ ವ್ಯಾಖ್ಯಾನಿಸಿದರು. ಶಾಲಾ ವಿದ್ಯಾರ್ಥಿಗಳು ಬಸಪ್ಪ ಶಾಸ್ತ್ರಿಗಳ ಸಾವಿತ್ರಿ ಚರಿತ್ರೆ ಮತ್ತು ರನ್ನನ ಗದಾಯುದ್ಧದ ಆಯ್ದ ಭಾಗದ ವಾಚನ ಮತ್ತು ವ್ಯಾಖ್ಯಾನ ಮಾಡಿದ್ದು ವಿಶೇಷ ಆಕರ್ಷಣೆಯಾಗಿತ್ತು.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…