ನಿಮ್ಮ ಧ್ವನಿ

ಎಕ್ಸ್ ಪ್ರೆಸ್ ರೈಲುಗಳ ವಿಳಂಬ ಪ್ರಯಾಣಕ್ಕೆ ಪುತ್ತೂರು ಪ್ಯಾಸೆಂಜರ್ ರೈಲು ಬಲಿಯಾಯಿತೇ?

ಮಂಗಳೂರು ಪುತ್ತೂರು ಪ್ಯಾಸೆಂಜರ್ ರೈಲು ಸಕಾಲಕ್ಕೆ ಓಡದಿದ್ದರೆ ಇದ್ದೂ ಏನು ಪ್ರಯೋಜನ? ಈ ಕುರಿತು ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿ ಹಾಗೂ ರೈಲ್ವೆ ಬಳಕೆದಾರ ಶ್ರೀಕರ ಬಿ. ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಶ್ರೀಕರ ಬಿ.

ಇತ್ತೀಚಿನ ದಿನಗಳಲ್ಲಿ ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ಓಡುವ ಸಂದರ್ಭದಲ್ಲಿ ಅದರ ಸುಗಮ ಸಂಚಾರಕ್ಕೆ ಉಳಿದ ರೈಲುಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿರುವ ಸಂಗತಿ ಗಮನಕ್ಕೆ ಬರುತ್ತಿದೆ. ಕೆಲವು ದಿನಗಳಿಂದು ನೈರುತ್ಯ ರೈಲ್ವೆ ವಲಯದ ಪ್ರದೇಶಲ್ಲಿಯೇ ತಡವಾಗಿ ಬರುವ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲನ್ನು ಮಂಗಳೂರು ಸೆಂಟ್ರಲ್ ತಲುಪುವ ಮೊದಲು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗಾಗಿ ತಡೆ ಹಿಡಿಯಲಾಗುತ್ತದೆ.

ಇದರ ಮಧ್ಯೆ ಮುಂಬೈನಿಂದ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ತಡವಾಗಿ ಬಂದರೆ ಈ ಎರಡು ರೈಲುಗಳು ಒಂದರ ನಂತರ ಒಂದಾಗಿ ಮಂಗಳೂರು ಸೆಂಟ್ರಲ್‌ ತಲುಪುತ್ತದೆ. ಇದೇ ಸಮಯಕ್ಕೆ ಪುತ್ತೂರಿನಿಂದ ಸರಿಯಾದ ಸಮಯಕ್ಕೆ ಯಾವಾಗಲು ನಿತ್ಯ ಪ್ರಯಾಣಿಕರೇ ಸಂಚರಿಸುವ ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್‌ ಪ್ಯಾಸೆಂಜರ್ ರೈಲು ಬರುತ್ತದೆ. ಇದು ಕೆಲವು ದಿನಗಳಂದು ಮಂಗಳೂರು ಜಂಕ್ಷನಿಗೆ 5 ನಿಮಿಷ ಮೊದಲೇ ಬರುತ್ತದೆ.

ಇದು ಎಷ್ಟೇ ಬೇಗ ಬಂದರೂ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ ತಲುಪದೆ,ಮುರುಡೇಶ್ವರ ರೈಲು ಮಂಗಳೂರು ಜಂಕ್ಷನ್ ಹಾದುಹೋಗದೆ ಮಂಗಳೂರು ಜಂಕ್ಷನಲ್ಲಿಯೇ ತಡೆಹಿಡಿಯಲಾಗುತ್ತಿದೆ. ಇದರಿಂದ ಪ್ರತಿದಿನ ಪುತ್ತೂರು ಪ್ಯಾಸೆಂಜರ್ ರೈಲು ಮಂಗಳೂರು ಸೆಂಟ್ರಲ್‌ ತಲುಪುವಾಗ 9:45ರ ಹತ್ತಿರ ಆಗುತ್ತಿದೆ. ಇದು ಈ ರೈಲಿನಲ್ಲಿ ಸಂಚರಿಸುವ ವಿದ್ಯಾರ್ಥಿಗಳು,ಉದ್ಯೋಗಿಗಳು ಹಾಗು ಇತರೇ ಪ್ರಯಾಣಿಕರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಈ ಸಮಸ್ಯೆ ವಂದೇ ಭಾರತ್ ರೈಲಿನಿಂದಾಗಿ ಆಗುತ್ತಿರುವುದೋ,ಮತ್ಸ್ಯಗಂಧ ಎಕ್ಸ್‌ಪ್ರೆಸ್‌,ಮುರುಡೇಶ್ವರ ರೈಲು ತಡವಾಗಿ ಪ್ರಯಾಣಿಸುತ್ತಿರುವುದರಿಂದ ಆಗುತ್ತಿರುವುದೋ ಗೊತ್ತಿಲ್ಲ.ರೈಲ್ ಮದದ್ ಅಲ್ಲಿ ಎಷ್ಟೇ ದೂರು ಕೊಟ್ಟರು ಪ್ರಯೋಜನ ಇಲ್ಲ.

ಬೇಜವಾಬ್ದಾರಿತನದ ಉತ್ತರವು ದೂರೂ ಕೊಟ್ಟ ಕೂಡಲೇ ಬರುತ್ತದೆ. ಇಂದು ಕೂಡ ಸಂಜೆ ಪುತ್ತೂರಿಗೆ ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುವಾಗ ಬೆಳಿಗ್ಗೆ ರೈಲು ಯಾವಾಗಲೂ ತಡವಾಗಿ ಮಂಗಳೂರಿಗೆ ತಲುಪುತ್ತಿರುವ ಬಗ್ಗೆ ನಿತ್ಯ ಪ್ರಯಾಣಿಕರು ಚರ್ಚಿಸುತ್ತಿದ್ದರು. ಆದ್ದರಿಂದ ಈ ಸಮಸ್ಯೆ ಬಗೆಹರಿಯಲು ಏನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ