ನಮ್ಮೂರು

ಮೌನೇಶ್ ವಿಶ್ವಕರ್ಮ ರಚಿಸಿದ ತಂತ್ರಜ್ಞಾನದ ಮಾಯೆ ವಿಜ್ಞಾನ ನಾಟಕಕ್ಕೆ ಪ್ರಥಮ ಸ್ಥಾನ

ಚಿತ್ರದುರ್ಗ ಜಿಲ್ಲೆಯ  ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ವಿಜ್ಞಾನ ನಾಟಕ‌ ಸ್ಪರ್ಧೆಯಲ್ಲಿ ಮೌನೇಶ ವಿಶ್ವಕರ್ಮ ರವರ ರಚಿಸಿದ “ತಂತ್ರಜ್ಞಾನದ ಮಾಯೆ” ವಿಜ್ಞಾನ ನಾಟಕ ಪ್ರಥಮ ಸ್ಥಾನಗಳಿಸಿದ್ದು, ಜಿಲ್ಲಾಮಟ್ಟದ ಅತ್ಯುತ್ತಮ ಕೃತಿ ಪ್ರಶಸ್ತಿಗೂ ಆಯ್ಕೆಯಾಗಿದೆ.

ಚಿತ್ರದುರ್ಗ ತಾಲೂಕು ಮಟ್ಟ ಹಾಗೂ ಚಿತ್ರದುರ್ಗ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ  ಚವಲಿಹಟ್ಟಿಯ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳು  “ತಂತ್ರಜ್ಞಾನದ ಮಾಯೆ” ವಿಜ್ಞಾನ ನಾಟಕವನ್ನು ಅಭಿನಯಿಸಿ ಪ್ರಥಮ ಸ್ಥಾನಗಳಿಸಿ, ಬೆಂಗಳೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ.

ಈ ನಾಟಕವನ್ನು ಶಾಲೆಯ ವಿಜ್ಞಾನ ಶಿಕ್ಷಕರಾದ ಸಿ.ಜಿ.ಹಾಲೇಶ್ ರವರು‌ ನಿರ್ದೇಶಿಸಿದ್ದು, ಉತ್ತಮ ನಿರ್ದೇಶನ, ಉತ್ತಮ‌ ನಟಿ ಪ್ರಶಸ್ತಿಗೂ ಗೊಲ್ಲರಹಟ್ಟಿ ಶಾಲೆಯ ಮಕ್ಕಳ ತಂಡ ಆಯ್ಕೆಯಾಗಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ನಡೆದ ವಿಜ್ಞಾನ ನಾಟಕ ಸ್ಪರ್ಧೆಗೆ ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿಯೂ ಆಗಿರುವ ಪತ್ರಕರ್ತ, ರಂಗಕರ್ಮಿ ಮೌನೇಶ ವಿಶ್ವಕರ್ಮ ಐದು ನಾಟಕಗಳನ್ನು ನಿರ್ದೇಶಿಸಿದ್ದರು. ಪುತ್ತೂರಿನಲ್ಲಿ ಸುದಾನ ವಸತಿ ಶಾಲೆ ಯಲ್ಲಿ ‘ರೋಗಗಳ ಮಾಯದಾಟ’, ಸವಣೂರು ಸರ್ಕಾರಿ ಪ್ರೌಢಶಾಲೆಯಲ್ಲಿ ‘ಸಿರಿಧಾನ್ಯ ಮಹಾತ್ಮೆ’ ಹಾಗೂ ಪೆರಿಯಡ್ಕದ‌ ಸರ್ವೋದಯ ಅನುದಾನಿತ ಪ್ರೌಢಶಾಲೆಯಲ್ಲಿ ‘ಡಿಜಿಟಲ್ ಮಾಯೆ’, ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ‘ಆರೋಗ್ಯ ಸಿರಿ’, ಸುಳ್ಯತಾಲೂಕಿನ ಎಣ್ಮೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ‘ಅಜ್ಞಾನದಿಂದ ವಿಜ್ಞಾನದೆಡೆಗೆ’ ಎನ್ನುವ ನಾಟಕಗಳನ್ನು ನಿರ್ದೇಶಿಸಿದ್ದು, ರಂಗಾಯಣ ಪದವೀಧರ ರಾಕೇಶ್ ಆಚಾರ್ಯ ನಿರ್ದೇಶನದಲ್ಲಿ ಸಹಕರಿಸಿದ್ದರು. ಮೌನೇಶ್ ಅವರು ಬಂಟ್ವಾಳನ್ಯೂಸ್ ಗೆ ಮಕ್ಕಳ ಮಾತು ಎಂಬ ಹೆಸರಿನಲ್ಲಿ ಅಂಕಣವನ್ನೂ ಬರೆದಿದ್ದಾರೆ. ಅದರ ಲಿಂಕ್ ಇಲ್ಲಿದೆ.

 

 

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts