ಕಲ್ಲಡ್ಕ

ಕಲ್ಲಡ್ಕದಲ್ಲಿ 91ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಂಭ್ರಮ: ಶೋಭಾಯಾತ್ರೆಯಲ್ಲಿ ಕೃಷ್ಣಲೋಕ

ಕಲ್ಲಡ್ಕದ ಶ್ರೀ ರಾಮ ಮಂದಿರದ 91 ನೇ ವರ್ಷದ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ಗುರುವಾರ ಜರಗಿತು. ಕಲ್ಲಡ್ಕ ಮಂದಿರದಿಂದ ಹೊರಟು ಪ್ರಮುಖ ರಸ್ತೆಯಲ್ಲಿ ಹಲವು ಟ್ಯಾಬ್ಲೋ ಸಹಿತ ಶ್ರೀಕೃಷ್ಣನ ಶೋಭಾಯಾತ್ರೆ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ಸಂಪನ್ನಗೊಂಡಿತು. video, photosಗಳಿಗೆ ಮುಂದೆ ಓದಿರಿ.

 

ಜಾಹೀರಾತು

ಶ್ರೀ ರಾಮ ವಿದ್ಯಾಕೇಂದ್ರದ  500 ಕ್ಕೂ ಹೆಚ್ಚು ಮಕ್ಕಳು ಕೃಷ್ಣ ಯಶೋದೆಯ ವೇಷದಲ್ಲಿ ಪಾಲ್ಗೊಂಡು ಕೃಷ್ಣಲೋಕ ಸೃಷ್ಟಿಸಿದರು. ಓಂ ಶಕ್ತಿ ಬಳಗದ ಗಜಾಸುರ ವಧೆ, ಕುದ್ರೆಬೆಟ್ಟು ಮಣಿಕಂಠ ಯುವಶಕ್ತಿಯ ಅರುಣಾಸುರ ವಧೆ,ರಾಯಪ್ಪಕೋಡಿ ತ್ರಿಶೂಲ್ ಫ್ರೆಂಡ್ಸ್ ನ ವೃತ್ತಾಸುರ ವಧೆ,ಕಟ್ಟೆಮಾರು ಮಂತ್ರದೇವತಾ ಕ್ಷೇತ್ರದ ಬಂಡಾಸುರ ವಧೆ,ವಿಶ್ವ ಹಿಂದು ಪರಿಷತ್ ಭಜರಂಗ ದಳದ ಚೆಂಡೆವಾದನ,ನಾಸಿಕ್ ಬೇಂಡ್ ಮೊದಲಾದ ಹಲವು ಸ್ತಬ್ದಚಿತ್ರಗಳು‌ಆಕರ್ಷಣೆ ನೀಡಿದವು.

ಜಾಹೀರಾತು

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಮೊದಲಾದ ಪ್ರಮುಖರಿದ್ದರು.

ಜಾಹೀರಾತು

 

ಜಾಹೀರಾತು

ಶ್ರೀ ರಾಮಾಂಜನೇಯ ಸೇವಾಟ್ರಸ್ಟ್ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ನೆರವೇರಿತು. ಮಂಗಳೂರು ವಿಭಾಗ ಸಹ ಕಾರ್ಯವಾಹ ಸುಭಾಶ್ಚಂದ್ರ ಕಳಂಜ ಮೊಸರು ಕುಡಿಕೆ ಮಹತ್ವ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ನಾಗೇಶ ಕಲ್ಲಡ್ಕ, ಶ್ರೀ ರಾಮ ಮಂದಿರ‌ ಆಡಳಿತ ಸಮಿತಿ‌ ಅಧ್ಯಕ್ಷ  ಚೆನ್ನಪ್ಪ ಕೋಟ್ಯಾನ್,ಕಾರ್ಯದರ್ಶಿ ಕ.ಕೃಷ್ಣ ಪ್ಪ,ಶ್ರೀರಾಮ ಸೇವಾ ಸಮಿತಿಯ ಪುಷ್ಪರಾಜ ಶೆಟ್ಟಿ ಗಾರ್,ಕಾರ್ಯದರ್ಶಿ ಸುಜಿತ್ ಕೊಟ್ಟಾರಿ , ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಹರೀಶ್,ಕಾರ್ಯದರ್ಶಿ ಉತ್ತಮ ಪಳನೀರು ಮೊದಲಾದವರು ನೇತೃತ್ವ ವಹಿಸಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts