ವಿಟ್ಲದ ಜೇಸಿ ಪೆವಿಲಿಯನ್ ಸಭಾಂಗಣ, ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 13ರ ಭಾನುವಾರ ಯಕ್ಷಮಿತ್ರರು ವಿಟ್ಲ ವಾಟ್ಸಾಪ್ ಬಳಗ ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವ ಪ್ರಯುಕ್ತ ವಿಟ್ಲ ಯಕ್ಷೋತ್ಸವ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ 1.30ರಿಂದ ವಾಚಿಕೋತ್ಸವ – ಅರುಣಾಸುರ, ಬೃಹಸ್ಪತಿ, ಅರ್ಜುನ – ಊರ್ವಶಿ, ಈಶ್ವರ – ಹನುಮಂತ (ತೆಂಕು ಬಡಗು ದ್ವಂದ್ವ ಭಾಗವತಿಕೆಯೊಂದಿಗೆ) ನಡೆಯಲಿದೆ. ಸತೀಶ್ ಪುಣಿಂಚಿತ್ತಾಯ, ಸತ್ಯನಾರಾಯಣ ಪುಣಿಂಚಿತ್ತಾಯ, ಸುರೇಶ್ ಶೆಟ್ಟಿ, ಗಣೇಶ್ ಕುಮಾರ್ ಹೆಬ್ರಿ, ಮಹೇಶ್ ಕನ್ಯಾಡಿ ಭಾಗವತರಾಗಿ ಭಾಗವಹಿಸಲಿದ್ದು, ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ರಾಧಾಕೃಷ್ಣ ಕಲ್ಚಾರ್, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗ ಭಟ್, ಗಣಪತಿ ಭಟ್ ಸಂಕದಗುಂಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸುವರು.
ಸಂಜೆ ತುಳು ಕಲೋತ್ಸವದಲ್ಲಿ ಕಾಡಮಲ್ಲಿಗೆ ಪ್ರಸಂಗ ಪ್ರದರ್ಶನಗೊಳ್ಳಲಿದೆ. ರವಿಚಂದ್ರ ಕನ್ನಡಿಕಟ್ಟೆ, ಶಿವಪ್ರಸಾದ್ ಎಡಪದವು ಭಾಗವತಿಕೆ ಇರಲಿದ್ದು, ಅಶೋಕ್ ಶೆಟ್ಟಿ ಸಹಿತ ಪ್ರಮುಖರು ಪಾತ್ರವರ್ಗದಲ್ಲಿದ್ದಾರೆ.
ಉತ್ಸವದ ಗೌರವಾರ್ಪಣೆಯಾಗಿ, ಕಲಾಪೋಷಕ ಗೌರವ ಪುರಸ್ಕಾರವನ್ನು ದಿನಕರ ಭಟ್ ಅವರಿಗೆ ನೀಡಲಾಗುವುದು. ಹುಟ್ಟೂರ ಗೌರವ ಪುರಸ್ಕಾರವನ್ನು ಹಿರಿಯ ಅರ್ಥಧಾರಿ ಶಂಭು ಶರ್ಮ ವಿಟ್ಲ ಅವರಿಗೆ ನೀಡಲಾಗುವುದು. ಗೌರವ ಪುರಸ್ಕಾರವನ್ನು ಹವ್ಯಾಸಿ ಹಿಮ್ಮೇಳ ವಾದಕ ಪಿ.ಬಿ.ಜಗನ್ನಿವಾಸ ರಾವ್ ಮತ್ತು ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರಿಗೆ ನೀಡಲಾಗುವುದು. ಇತ್ತೀಚೆಗೆ ನಮ್ಮನ್ನಗಲಿದ ಕಲಾವಿದ ದಿ.ಜಗದೀಶ ನಲ್ಕ ಕುಟುಂಬಕ್ಕೆ ಯಕ್ಷ ಸಾಂತ್ವನ ನಿಧಿ ಸಮರ್ಪಿಸಲಾಗುವುದು.ಧನಸಹಾಯಕ್ಕೆ 9740669531 ನಂಬರ್ ಗೆ ಗೂಗಲ್ ಪೇ ಅಥವಾ ಫೊನ್ ಪೇ ಮಾಡಬಹುದು ಎಂದು ಕಾರ್ಯಕ್ರಮ ಸಂಯೋಜಕ ಮುರಾರಿ ಭಟ್ ಪಂಜಿಗದ್ದೆ ಹೇಳಿದ್ದಾರೆ.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)