ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭವು ಕಾರ್ಮೆಲ್ ಹಾಲ್ ನಲ್ಲಿ ಜರುಗಿತು. ಪ್ರಾಂಶುಪಾಲರಾದ ವಂದನೀಯ ಭಗಿನಿ ನವೀನ ಎ.ಸಿ., ಉಪ ಪ್ರಾಂಶುಪಾಲೆ ವಂದನೀಯ ಭಗಿನಿ ಫ್ರೆಲ್ಸಿಟ್ಟ ಎ.ಸಿ, ಉಪನ್ಯಾಸಕ ಸುರೇಶ್ ನಂದೊಟ್ಟು ಹೆತ್ತವರ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ,ಹೆತ್ತವರು, ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಪರಸ್ಪರ ಅರಿತು ಹೊಂದಾಣಿಕೆಯಿಂದ ಶ್ರಮಿಸಿದರೆ ಯಶಸ್ಸು ಖಂಡಿತ ಸಾಧ್ಯ ಎಂದು ಪ್ರಾಂಶುಪಾಲರು ಅಭಿಪ್ರಾಯ ಪಟ್ಟರು. ಕಾಲೇಜಿನ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ಭಗಿನಿ ಫೆಲ್ಶಿಟ್ಟ ಎ.ಸಿ ಹಾಗೂ ಉಪನ್ಯಾಸಕಿ ಪ್ರೀತಿ ಮಾಡ್ತಾ ತಿಳಿಸಿದರು. ಉಪನ್ಯಾಸಕ ಸಂತೋಷ್ ಡಿಸೋಜ ಸ್ವಾಗತಿಸಿ ಸೌಜನ್ಯ ವಂದಿಸಿದರು. ಸುರೇಶ್ ನಂದೊಟ್ಟು ನಿರೂಪಿಸಿದರು
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…