ಬಂಟ್ವಾಳ

ಮನೆಯವರಿಲ್ಲದ ವೇಳೆ ಕಳವು: ಲಕ್ಷಾಂತರ ರೂ ನಗನಗದು ದೋಚಿದ ಕಳ್ಳರು

ಬಂಟ್ವಾಳ: ಮನೆಯ ಬೀಗ ತೆಗೆದು ಲಕ್ಷಾಂತರ ರೂ ಮೌಲ್ಯದ ನಗನಗದು ಕಳವು ಮಾಡಿದ ಘಟನೆ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಇರಾದಲ್ಲಿ ನಡೆದಿದೆ. 

ಜಾಹೀರಾತು

ಒಟ್ಟು 3,11,550 ರೂ ಮೌಲ್ಯದ ಚಿನ್ನಾಭರಣ ಕಳವುವಾಗಿದ್ದು, ಸಣ್ಣ ಪ್ಲಾಸಿಕ್‌ ಬಾಕ್ಸ್ ನಲ್ಲಿ ಇಟ್ಟಿದ್ದ ಕಿವಿಯ ಬೆಂಡೋಲೆ ಅಂದಾಜು 10 ಗ್ರಾಂ, 3 ಉಂಗುರಗಳು ಅಂದಾಜು ತೂಕ 8 ಗ್ರಾಂ, ಹವಳದ ಸರ ಅಂದಾಜು ತೂಕ 20 ಗ್ರಾಂ ಹಾಗೂ ಅದರ ಪಕ್ಕದಲ್ಲಿ ಇಟ್ಟಿದ್ದ ಕರಿಮಣಿ ಸರ, ಅಂದಾಜು ತೂಕ 35 ಗ್ರಾಂ, 2 ಕೈಬಳೆಗಳು ಅಂದಾಜು ತೂಕ 20ಗ್ರಾಂ, ಇವುಗಳು ಕಳವಾಗಿವೆ. ಒಟ್ಟು ತೂಕ 93 ಗ್ರಾಂ ಆಗಿದೆ.  ಮನೆಯಲ್ಲಿ ಯಾರು ಇಲ್ಲದ ವೇಳೆ ಹಗಲು ಹೊತ್ತಿನಲ್ಲಿ ಮನೆಯಿಂದ  ಕಳವು ಮಾಡಿದ್ದಾರೆ ಎಂದು ಗ್ರಾಮಾಂತರ ಪೋಲೀಸ್ ಠಾಣೆಗೆ ಮನೆಯ ಮಾಲಕಿ ದೂರು ನೀಡಿದ್ದಾರೆ.

ಮನೆಯಲ್ಲಿರುವವರು ಕೆಲಸಕ್ಕೆಂದು ಬೆಳಗ್ಗೆ ಹೋಗಿದ್ದರು. ಈ ಸಂದರ್ಭ ಮನೆಗೆ ಬೀಗ ಹಾಕಿ, ಕೀಯನ್ನು ಬಚ್ಚಲು ಕೋಣೆಯಲ್ಲಿರಿಸಿ ಹೋಗುತ್ತಿದ್ದರು. ಅದೇ ರೀತಿ ಬೀಗದ ಕೈಯನ್ನು ಇಟ್ಟು ಹೋಗಿದ್ದರು. ಸಂಜೆ ಪತಿ, ಪತ್ನಿ ಕೆಲಸ ಮುಗಿಸಿ ಮನೆಗೆ ಬಂದು ನೋಡುವಾಗ ಬೀಗ ಹಾಕಿತ್ತು. ಆದರೆ ಬೀಗ ತೆಗೆದು ಒಳಗೆ ಹೋದಾಗ ಕಳವು ಕೃತ್ಯ ಬೆಳಕಿಗೆ ಬಂತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ