ಜೋಡುಮಾರ್ಗ ಜೇಸಿಯ ಶ್ರೀನಿಧಿ ಭಟ್ ಅವರಿಗೆ ಉದ್ಯಮರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೇಸಿ ಬೆಳ್ಮಣ್ಣು ಆಶ್ರಯದಲ್ಲಿ ನಡೆದ ಜೇಸಿಐ 15 ರ ವ್ಯವಹಾರ ವಿಭಾಗದ ಸಮ್ಮೇಳನದಲ್ಲಿ ಜೆಸಿಐ ಜೋಡುಮಾರ್ಗ ನೇತ್ರಾವತಿ ಪೂರ್ವಾಧ್ಯಕ್ಷ ಶ್ರೀನಿಧಿ ಭಟ್ ಉದ್ಯಮ ಕ್ಷೇತ್ರದ ಸಾಧನೆ ಗುರುತಿಸಿ ಪ್ರತಿಷ್ಠಿತ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರು ಬಿ.ಸಿ.ರೋಡಿನಲ್ಲಿ ಸಪ್ತಶ್ರೀ ಕನ್ಸ್ಟ್ರಕ್ಷನ್ ಸಂಸ್ಥೆ ಮೂಲಕ ಕಟ್ಟಡ ನಿರ್ಮಾಣ ಕಾರ್ಯನಿರ್ವಹಿಸುತ್ತಿದ್ದು ಗುಣಮಟ್ಟದ ಕಾಮಗಾರಿಯ ಮೂಲಕ ಗುರುತಿಸಲ್ಪಟ್ಟಿದ್ದಾರೆ. ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಉತ್ತಮ ಗಾಯಕರು ಆಗಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ಸಂದರ್ಭ ವಲಯಾಧ್ಯಕ್ಷ ರಾಯನ್ ಉದಯ ಕ್ರಾಸ್ತಾ, ಪುರುಷೋತ್ತಮ ಶೆಟ್ಟಿ, ಸೌಮ್ಯ ರಾಕೇಶ್, ಜೆಸಿಐ ಜೋಡುಮಾರ್ಗ ನೇತ್ರಾವತಿ ಯ ಸದಸ್ಯರು ಉಪಸ್ಥಿತರಿದ್ದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…