ಬಂಟ್ವಾಳ: ಮೊಡಂಕಾಪು ಬಾಲಯೇಸು ದೇವಾಲಯದಲ್ಲಿ ಬಾಲಮರಿಯಮ್ಮನವರ ಹುಟ್ಟುಹಬ್ಬ ಆಚರಣೆ ಗುರುವಾರ ನಡೆಯಿತು. ಬಾಲ ಮಾರಿಯಮ್ಮನವರ ಪ್ರತಿಮೆಯ ಮೆರವಣಿಗೆಯು ಬೆಳಿಗ್ಗೆ 6:45 ಕಾಯಾರ್ಮಾರ್ ನಿಂದ ಪ್ರಾರಂಭಗೊಂಡು ಆಮ್ಟಾಡಿ ಸೊಸಾಯ್ಟಿ, ನಲ್ಕೆಮಾರ್, ಏರಿಯಾ ಮಾರ್ಗವಾಗಿ 8:00 ಘಂಟೆಗೆ ಮೊಡಂಕಾಪು ಬಾಲ ಯೇಸು ದೇವಾಲಯ ತಲುಪಿತು.
ತೆರೆದ ಆಂಗಣದಲ್ಲಿ ಮರಿಯಮ್ಮನವರ ಗ್ರೋಟ್ಟೋ ಮುಂಭಾಗದಲ್ಲಿ ಹೊಸ ತೆನೆ ಯನ್ನು ವಂದನೀಯ ಧರ್ಮಗುರುಗಳಾದ ಮೆಲ್ವಿನ್ ಲೋಬೊರವರಿಂದ ಆಶೀರ್ವಚನಗೊಂಡು, ಬಾಲ ಯೇಸು ದೇವಾಲಯದಲ್ಲಿ ಪ್ರಧಾನ ಧರ್ಮಗುರುಗಳಾದ ವಂದನೀಯ ವಲೇರಿಯನ್ ಡಿಸೋಜರವರಿಂದ ದಿವ್ಯ ಬಲಿಪೂಜೆ ಅರ್ಪಿಸಲಾಯಿತು. ಸಹಾಯಕ ಧರ್ಮಗುರುಗಳಾದ ವಂದನೀಯ ರಾಹುಲ್ ಡೆಕ್ಸ್ಟರ್ ಡಿ ಸೋಜಾ ಹಾಗೂ ಅತಿಥಿ ಧರ್ಮಗುರುಗಳಾದ ವಂದನೀಯ ಎಲಿಯಾಸ್ ಪ್ರ್ಯಾಂಕ್ ಹಾಜರಿದ್ದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…