ಬಂಟ್ವಾಳ: ಕದ್ದ ದನಗಳನ್ನು ಮಾಂಸ ಮಾಡಿ ಮಾರಿದ ಆರೋಪದಲ್ಲಿ ತಂದೆ, ಮಗನನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಗೋಳ್ತಮಜಲು ಗ್ರಾಮದ ಮದಕ ಎಂಬಲ್ಲಿ ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಗೋಳ್ತಮಜಲು ನಿವಾಸಿಗಳಾದ ಮಹಮ್ಮದ್ ಇಸ್ಮಾಯಿಲ್ (47) ಮತ್ತು ಆತನ ಮಗ ಸಾಬಿತ್ ಹುಸೈನ್ (18) ಬಂಧಿತ ಆರೋಪಿಗಳು. ಗೋಳ್ತಮಜಲು ಮಹಮ್ಮದ್ ಎಂಬವರ ಮನೆಯಲ್ಲಿ ಕದ್ದು ತಂದ ದನಗಳನ್ನು ವದೆ ಮಾಡಿ ಬಳಿಕ, ಮಾಂಸ ಮಾರಾಟ ಮಾಡಲಾಗುತ್ತಿತ್ತು ಎಂಬ ಖಚಿತ ಮಾಹಿತಿಯಂತೆ ಬಂಟ್ವಾಳ ನಗರ ಠಾಣಾ ಎಸ್ ಐ.ಅವಿನಾಶ್ ನೇತೃತ್ವದ ನಗರ ಠಾಣಾ ಪೊಲೀಸರ ತಂಡ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿ, ಮಾಂಸ ಸಹಿತ ಆರೋಪಿಗಳು ಬಂಧಿಸಿತು. ದಾಳಿಯ ವೇಳೆ ಅಂದಾಜು 21 ಸಾವಿರ ರೂಪಾಯಿಯ 80 ಕೆಜಿ ದನದ ಮಾಂಸ ಹಾಗೂ ಸುಮಾರು 4,500 ರೂಗಳನ್ನು ವಶಪಡಿಸಿಕೊಳ್ಳಲಾಯಿತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…