ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನರಹರಿ ಪರ್ವತ ಸಮೀಪ ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಕಬಕ ಗ್ರಾಮದ ಪರನೀರುಕಟ್ಟೆಯ ಮಹಮ್ಮದ್ ರಫೀಕ್ ಮುನ್ನಾ (44), ಪುತ್ತೂರು ಕೆಮ್ಮಿಂಜೆಯ ಮುಕ್ರಂಪಾಡಿ ಮನೆಯ ತಾರಾನಾಥ ಪೂಜಾರಿ (27) ಬಂಧಿತ ಆರೋಪಿಗಳು. ಬಂಧಿತ ರಿಂದ 7.500 ಮೌಲ್ಯದ 355 ಗ್ರಾಂ ಗಾಂಜಾ ವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್ ಸೂಚನೆಯಂತೆ ವಿಶೇಷ ಸಿಬ್ಬಂದಿಯಾದ ಉದಯ ರೈ, ಕುಮಾರ್ ಕೆ, ನಾಗರಾಜ್ ಜೊತೆ ಅಪರಾಧ ವಿಭಾಗ ಎಸ್.ಐ. ಕಲೈಮಾರ್ ಈ ಕಾರ್ಯಾಚರಣೆ ನಡೆಸಿದ್ದಾರೆ. ನರಹರಿ ಪರ್ವತ ರಸ್ತೆಯಲ್ಲಿ ಆರೋಪಿಗಳು ಪೊಲೀಸರನ್ನು ನೋಡಿ ಓಡಿ ಹೋಗಲು ಯತ್ನಿಸಿದ್ದು, ಅವರನ್ನು ವಿಚಾರಿಸಿದಾಗ ಗಾಂಜಾ ಹೊಂದಿರುವುದು ಕಂಡುಬಂದಿದ್ದು, ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…