ಕಲ್ಲಡ್ಕ

ಈ ಬಾರಿ ಸುಳ್ಳಮಲೆಯಲ್ಲಿ ತೀರ್ಥಸ್ನಾನವಿಲ್ಲ: ಸಾಂಪ್ರದಾಯಿಕವಾಗಿ ಕೇರ್ಪು ಇಡುವ ಆಚರಣೆ

ಬಂಟ್ವಾಳ: ಸೋಣ ಅಮವಾಸ್ಯೆಯ ದಿನದಿಂದ  ಬಾದ್ರಪದ ಶುಕ್ಲ ಚೌತಿ ಹಬ್ಬದ ದಿನದವರೆಗೆ ಸುಳ್ಳಮಲೆ ತೀರ್ಥಸ್ನಾನಕ್ಕೆ ಪೂರ್ವಭಾವಿಯಾಗಿ ಬಿದಿರಿನ ಕೇರ್ಪು ( ಏಣಿ) ಇಡುವ ಸಂಪ್ರದಾಯ ನಡೆಯಿತು. ಸರಕಾರದ ಸುತ್ತೋಲೆಯಂತೆ ಈ ಬಾರಿ ಸರಳವಾಗಿ ಭಕ್ತಾದಿಗಳಿಗೆ ಗುಹಾತೀರ್ಥ ಸ್ನಾನಕ್ಕೆ ಅವಕಾಶ ನೀಡದೆ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.

ಗುಹಾ ತೀರ್ಥಕ್ಕೆ  ಪ್ರಾರ್ಥನೆ ಸಲ್ಲಿಸಿ,ಕೇರ್ಪು ಇಟ್ಟು  ದಾರ್ಮಿಕ ವಿಧಿ-ವಿದಾನವನ್ನು  ನೆರವೇರಿಸಿ ಅರಸು ಗುಡ್ಡೆಚಾಮುಂಡಿ  ಮತ್ತು ಪ್ರಧಾನಿ ಪಂಜುರ್ಲಿ ದೈವಗಳಿಗೆ ತಂಬಿಲ  ನೆರವೇರಿಸಲಾಯಿತು.ಈ ಸಂದರ್ಭ ದೈವದ ಅರ್ಚಕರಾದ ಪಳನೀರು ಅನಂತ ಭಟ್, ಹರಿ ಭಟ್ ,ಮಾಣಿಗುತ್ತು ಸಚಿನ್ ರೈ ಮತ್ತು ಗ್ರಾಮಸ್ತರು ಸೀಮಿತ ಸಂಖ್ಯೆಯಲ್ಲಿ ಉಪಸ್ತಿತರಿದ್ದರುಭಕ್ತಾದಿಗಳಿಗೆ ಗುಹಾ ಪ್ರವೇಶ ಹಾಗು ಗುಹಾತೀರ್ಥ ಸ್ನಾನ ಮಾಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ