ಬಂಟ್ವಾಳ

ಬಂಟ್ವಾಳದ ಎನ್. ಪ್ರತೀಕ್ ಮಲ್ಯ ಅವರಿಗೆ ಎಸ್ಸೆಸ್ಸೆಲ್ಸಿಯಲ್ಲಿ ಫುಲ್ ಮಾರ್ಕ್ಸ್ 625/625

ಬಂಟ್ವಾಳ ಎಸ್.ವಿ.ಎಸ್.ದೇವಳ ಶಾಲೆ ವಿದ್ಯಾರ್ಥಿ

ಬಂಟ್ವಾಳ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯ ಅವರು ಪೂರ್ಣ ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.  ಅವರಿಗೆ 625ರಲ್ಲಿ 625 ಅಂಕಗಳು ಲಭಿಸಿವೆ.

ಬಂಟ್ವಾಳ: ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯ ಅವರಿಗೆ 625ರಲ್ಲಿ 625 ಅಂಕಗಳು ಲಭಿಸಿವೆ. ಬಂಟ್ವಾಳ ತ್ಯಾಗರಾಜ ರಸ್ತೆ ನಿವಾಸಿ ಎನ್. ವೆಂಕಟೇಶ್ ಮಲ್ಯ ಹಾಗೂ ರಾಧಿಕಾ ಮಲ್ಯ ಅವರ ಪುತ್ರನಾಗಿರುವ ಪ್ರತೀಕ್ ಅವರು ಮುಂದೆ ಕಾಮರ್ಸ್ ನಲ್ಲಿ ಕಲಿಕೆ ಮುಂದುವರಿಸಿ, ಉದ್ಯಮಿಯಾಗುವ ಗುರಿ ಹೊಂದಿದ್ದಾರೆ. ಪ್ರಣವ್ ಮತ್ತು ಪ್ರಾರ್ಥನಾ ಎಂಬ ತಮ್ಮ, ತಂಗಿಯರನ್ನು ಹೊಂದಿರುವ ಪ್ರತೀಕ್ ಗೆ ಡಾಕ್ಟರ್, ಇಂಜಿನಿಯರ್ ಆಗುವ ಬದಲು ಉದ್ಯಮಿಯಾಗುವ ಹೆಬ್ಬಯಕೆ. ತನ್ನ ಸಾಧನೆಗೆ ಶಿಕ್ಷಕರ ಪ್ರೋತ್ಸಾಹ, ಪೋಷಕರು, ಮನೆಯವರ ಬೆಂಬಲವೇ ಕಾರಣ ಎಂದು ಹೇಳಿರುವ ಅವರು ಸತತ ಓದುವಿಕೆಯೊಂದಿಗೆ ಬಿಡುವಾದಾಗ ಕೊಳಲುವಾದನ ಹವ್ಯಾಸವಾಗಿಟ್ಟುಕೊಂಡಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಾಧನೆಯನ್ನು ಅಭಿನಂದಿಸಿದ್ದಾರೆ. ಇದೀಗ ಜಿಲ್ಲೆಯ 9 ಮಂದಿ ಟಾಪರ್ ಗಳಲ್ಲಿ ಅವರೂ ಒಬ್ಬರು. ಇವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ