ಬಂಟ್ವಾಳ

ನರಿಕೊಂಬು ಬಿರ್ವೆರ್ ಸೇವಾ ಟ್ರಸ್ಟ್ ವತಿಯಿಂದ ಗ್ರಾಮದ 1 ಸಾವಿರಕ್ಕಿಂತಲೂ ಅಧಿಕ ಬಡ ಕುಟುಂಬಗಳಿಗೆ ಅಕ್ಕಿವಿತರಣೆ

ಬಂಟ್ವಾಳ: ಲಾಕ್‌ಡೌನ್ ವೇಳೆ ಸಂಕಷ್ಟಕ್ಕೀಡಾದ ನರಿಕೊಂಬು ಗ್ರಾಮದ 1 ಸಾವಿರಕ್ಕಿಂತಲೂ ಅಧಿಕ ಬಡಕುಟುಂಬಗಳಿಗೆ ಹಾಗೂ 8 ಮಂದಿ ಆಶಾಕಾರ್ಯಕರ್ತಯರಿಗೆ ತಲಾ 10 ಕೆ.ಜಿಯಂತೆ ಅಕ್ಕಿಯನ್ನು ಬಿರ್ವೆರ್ ಸೇವಾ ಟ್ರಸ್ಟ್ ನರಿಕೊಂಬು ವತಿಯಿಂದ ಭಾನುವಾರ ವಿತರಿಸಲಾಯಿತು.

ಟ್ರಸ್ಟ್‌ನ ಕಚೇರಿಯಲ್ಲಿ ಆರೋಗ್ಯ ಸಹಾಯಕಿ ಸಹಿತ ಆಶಾಕಾರ್ಯಕರ್ತಯರಿಗೆ ನರಿಕೊಂಬು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು ಅಕ್ಕಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಟ್ರಸ್ಟಿ ಕೇಶವ ಶಾಂತಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದಂತೆ ಬಿರ್ವೆರ್ ಸೇವಾ ಟ್ರಸ್ಟ್ ಮೂಲಕ ನರಿಕೊಂಬು ಗ್ರಾಮದ  ಸರ್ವ ಜಾತಿ, ಧರ್ಮಗಳ ಜನರಿಗೆ ಅಕ್ಕಿ ವಿತರಿಸುವ ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದೇವೆ. ಕಳೆದ ವರ್ಷ ಕರೋನಾ ಒಂದನೇ ಅಲೆ ಬಾಧಿಸಿದಾಗಲೂ ಬಡವರಿಗೆ ಅಕ್ಕಿ ವಿತರಿಸಿದ್ದೇವೆ, ಈ ಸಂದರ್ಭದಲ್ಲೂ ನಮ್ಮ ಸೇವಾ ಕಾರ್ಯವನ್ನು ಮುಂದುವರೆಸಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭ ಟ್ರಸ್ಟ್‌ನ ಅಧ್ಯಕ್ಷ ದಿನೇಶ್ ಭಾಗೀರಥಿ ಕೋಡಿ, ಕಾರ್ಯದರ್ಶಿ ಸಂಜೀವ ಎನ್., ಕೋಶಾಧಿಕಾರಿ ಸದಾಶಿವ, ಜೊತೆಕಾರ್ಯದರ್ಶಿ  ಸತೀಶ್ ಎನ್., ಸಂಘಟನಾ ಕಾರ್ಯದರ್ಶಿ ಮನೋಜ್ ಪೂಜಾರಿ ನಿರ್ಮಲ್, ಟ್ರಸ್ಟಿಗಳಾದ ಕೇಶವ ಶಾಂತಿ, ಶ್ರೀಧರ ಪೂಜಾರಿ, ಕೃಷ್ಣಪ್ಪ ಪೂಜಾರಿ, ಯೋಗೀಶ್ ಅಮೀನ್, ನಾರಾಯಣ ಪೂಜಾರಿ, ಸೀತಾರಾಮ, ಶಿವಶಂಕರ್, ಯಜ್ಞಶ್ರೀ, ವೀಣಾ, ರಾಜೇಶ್ ಬೋಳಂತೂರು, ಗೌರವ ಸಲಹೆಗಾರ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಬೃಹತ್ ಮತು ಮಧ್ಯಮಕೈಗಾರಿಕೆ ಖಾತೆ ಸಚಿವರ ಆಪ್ತ ಕಾರ್ಯದರ್ಶಿ ಜಗನ್ನಾಥ ಬಂಗೇರ ನಿರ್ಮಲ್,   ಪ್ರಮುಖರಾದ ರಮೇಶ್ ಬೋರುಗುಡ್ಡೆ, ಉಮೇಶ್ ನೆಲ್ಲಿಗುಡ್ಡೆ, ಹರೀಶ್ ಅಂಚನ್ ನರಿಕೊಂಬು, ಪ್ರಕಾಶ್ ಕೋಡಿಮಜಲು, ಸಂಚಾಲಕರಾದ ಚೇತನ್ ಏಲಬೆ, ಮಹೇಶ್ ರಾಯಸ, ದಿವಾಕರ ಅರೆಬೆಟ್ಟು, ಮೋಹನ್ ಕಲ್ಯಾರ್, ಸುರೇಶ್ ಕೋಟ್ಯಾನ್ ಸಜಂಕ್ಪಾಲಿಕೆ, ಮಾಧವ ಕರ್ಬೆಟ್ಟು, ಉದಯ ಶಾಂತಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಟ್ರಸ್ಟ್ ಸದಸ್ಯರು ನರಿಕೊಂಬು ಗ್ರಾಮದ ಮನೆ ಮನೆಗೆ ತೆರಳಿ ಅಕ್ಕಿ ವಿತರಿಸಿದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.