ಬಂಟ್ವಾಳ: ಮನೆ ಎದುರು ಕೋಣೆಯೊಂದರಲ್ಲಿ ಇಟ್ಟಿದ್ದ 15 ಗೋಣಿ ಚೀಲಗಳಲ್ಲಿದ್ದ ಸುಮಾರು 1 ಲಕ್ಷ ರೂ ಮೌಲ್ಯದ ಅಡಕೆ ಕಳವು ಮಾಡಿದ್ದಾಗಿ ಕರೋಪಾಡಿ ಗ್ರಾಮದ ಪೆರ್ನೆಮುಗೇರು ನಿವಾಸಿ ಅಬ್ದುಲ್ ರಝಾಕ್ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಫೆ.25ರ ರಾತ್ರಿಯಿಂದ 26ರ ಬೆಳಗ್ಗೆ ಅವಧಿಯೊಳಗೆ ಘಟನೆ ನಡೆದಿರುವುದಾಗಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದು, ಮನೆಯ ಎದುರು ಅಡಿಕೆ ಹಾಗೂ ತೆಂಗಿನಕಾಯಿ ಶೇಖರಣೆ ಮಾಡುವ ಕೊಣೆಯಲ್ಲಿದ್ದ 15 ಗೋಣಿ ಚೀಲದಲ್ಲಿದ್ದ ಅಂದಾಜು ಸುಮಾರು 1 ಲಕ್ಷ ಮೌಲ್ಯದ, 300 ಕೆಜಿ ಇಡಿ ಅಡಿಕೆಯನ್ನು ಕಳ್ಳರು ಕೋಣೆಯ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…