ಬಂಟ್ವಾಳ

ಮೆಲ್ಕಾರ್ ನಲ್ಲಿ ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾದ ಸ್ಟಡಿ ಸೆಂಟರ್ ಉದ್ಘಾಟನೆ

ಬಂಟ್ವಾಳ: ಹವ್ವಾ ಜುಮ್ಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಗಳ್ ಅವರು ಮೆಲ್ಕಾರಿನ ಸುಲ್ತಾನ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ  ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಒ) ಪಾಣೆಮಂಗಳೂರು ಶಾಖೆಯ ನೂತನ ಕಚೇರಿಯಾದ ಸ್ನೇಹ ಸ್ಟಡಿ ಸೆಂಟರ್ ನ್ನು ಉದ್ಘಾಟಿಸಿದರು.

ಜಮಾಅತೆ ಇಸ್ಲಾಮೀ ಹಿಂದ್(ಜೆ.ಐ.ಹೆಚ್) ದ.ಕ. ಜಿಲ್ಲಾ ಸಂಚಾಲಕ ಸಈದ್ ಇಸ್ಮಾಯೀಲ್ ಮಾತನಾಡಿ, ಎಸ್.ಐ.ಓ ನಿಂದ ತರಬೇತಿಗೊಂಡ ವಿಧ್ಯಾರ್ಥಿ ಗಳು ಸಮಾಜಕ್ಕೆ ಮಾರ್ಗದರ್ಶಕರಾಗುತ್ತಾರೆ ಎಂದರು. ಜೆ.ಐ.ಹೆಚ್.ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್.ಯು. ಸಮಾರೋಪ ನುಡಿಗಳನ್ನಾಡುತ್ತ, ಸಂಘಟನೆಯ ಧ್ಯೇಯದೊಂದಿಗೆ ಮುನ್ನುಗ್ಗಿ ಯುವಕರು ಕಾರ್ಯಪ್ರವೃತ್ತರಾಗಬೇಕು ಎಂದು ಕರೆಯಿತ್ತರು. ಈ ಸಂದರ್ಭ ಅತಿಥಿಗಳಾಗಿ ಭಾಗವಹಿಸಿದ್ದ ಜೆ.ಐ.ಹೆಚ್. ಪಾಣೆಮಂಗಳೂರು ಶಾಖಾಧ್ಯಕ್ಷ  ಮುಖ್ತಾರ್ ಅಹ್ಮದ್, ಎಸ್.ಐ.ಓ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ದಾನಿಶ್ ಚೆಂಡಾಡಿ ಮತ್ತು ಸಮಾಜ ಸೇವಕ ಶರೀಫ್ ಸಾದ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಸಫ್ವಾನ್ ಬೋಳಂಗಡಿ ಕಿರಾಅತ್ ಪಠಿಸಿದರು. ಎಸ್.ಐ.ಓ. ಪಾಣೆಮಂಗಳೂರು ಘಟಕಾಧ್ಯಕ್ಷ ಮುತಹ್ಹರ್ ಬೋಳಂಗಡಿ ಧನ್ಯವಾದವಿತ್ತರು. ಸಲ್ವಾನ್ ಬೋಳಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ