ಬಂಟ್ವಾಳ

ಬಂಟ್ವಾಳದಲ್ಲಿ ಚುರುಕಿನ ಮತದಾನ, 3 ಗಂಟೆ ವೇಳೆ ಶೇ.64.5 ಮಂದಿ ಹಕ್ಕು ಚಲಾವಣೆ

ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಪಂಗಳ ಚುನಾವಣೆ ಮಂಗಳವಾರ 7 ಗಂಟೆಗೆ ಆರಂಭಗೊಂಡು ಸಂಜೆ 5 ಗಂಟೆಗೆ ಮುಕ್ತಾಯಗೊಂಡಿದೆ. ಮಧ್ಯಾಹ್ನ 3 ಗಂಟೆವರೆಗಿನ ಮತ ಚಲಾವಣೆಯ ಲೆಕ್ಕಾಚಾರಗಳನ್ವಯ ಒಟ್ಟು 64.5 ಶೇಕಡಾ ಮತ ಚಲಾವಣೆಯಾಗಿದೆ. 87571 ಮಂದಿ ಪುರುಷರು, 91178 ಮಹಿಳೆಯರು ಹಾಗೂ 3 ಇತರರು ಮತ ಚಲಾವಣೆ ಮಾಡಿದ್ದಾರೆ. ಒಟ್ಟು 1,78,752 ಮಂದಿ ಮಧ್ಯಾಹ್ನ 3 ಗಂಟೆಯೊಳಗೆ ತಮ್ಮ ಹಕ್ಕು ಚಲಾವಣೆ ಮಾಡಿದ್ದು ವಿಶೇಷ. ಮಹಿಳೆಯರು, ವೃದ್ಧರು, ಮೊದಲ ಬಾರಿ ಮತ ಚಲಾವಣೆ ಮಾಡುವ ಉತ್ಸಾಹಿಗಳು ಬಿಸಿಲನ್ನೂ ಲೆಕ್ಕಿಸದೆ ಮತದಾನ ಮಾಡಿದರೆ, ಬೂತ್ ನ ಹೊರಗೆ ನಿಗದಿಪಡಿಸಿದ ಜಾಗಗಳಲ್ಲಿ  ಅಭ್ಯರ್ಥಿಗಳು ನಿಂತುಕೊಂಡದ್ದು ಕಂಡುಬಂತು. ಮತಗಟ್ಟೆಗಳಲ್ಲಿ  ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರ ಜೊತೆಗೆ ಸ್ಯಾನಿಟೈಸರ್ ಒದಗಿಸುವ ಹಾಗೂ ಥರ್ಮಲ್ ಸ್ಕ್ಯಾನರ್ ಮೂಲಕ ತಾಪಮಾನ ಪರೀಕ್ಷೆ ಮಾಡುತ್ತಿದ್ದರೆ, ಮಾಸ್ಕ್ ಹಾಕಿ ಮತಗಟ್ಟೆಗೆ ಆಗಮಿಸಲು ಪ್ರೇರೇಪಣೆ ನೀಡಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ