ಬಂಟ್ವಾಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಗೋಳ್ತಮಜಲು ಗ್ರಾಮ ಪಂಚಾಯತ್ಗೆ ಸಂಬಂಧಪಟ್ಟ ಆಮ್ಟೂರು ಶಕ್ತಿ ಕೇಂದ್ರ ಮತ್ತು ಗೋಳ್ತಮಜಲು ಶಕ್ತಿ ಕೇಂದ್ರದ ಜಂಟಿ ಆಶ್ರಯದಲ್ಲಿ “ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ” ಜನಾಂದೋಲನ ಪ್ರತಿಭಟನೆ ನಡೆಯಿತು.
ಆಮ್ಟೂರು ಗ್ರಾಮದ ರಾಯಪ್ಪ ಕೋಡಿಯ ಲಕ್ಷದೀಪೋತ್ಸವ ಕಟ್ಟೆಯಿಂದ ಗೋಳ್ತಮಜಲು ಗ್ರಾಮ ಪಂಚಾಯತ್ವರೆಗೆ ಕಾಲ್ನಡಿಗೆ ಜಾಥಾದ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಳಿಕ ಕಲ್ಲಡ್ಕ ಶ್ರೀ ರಾಮ ಮಂದಿರದ ಎದುರಿನ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ಕೆಳಭಾಗದಲ್ಲಿ ಹಕ್ಕೋತ್ತಾಯ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಾಲಭವನ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ರಾಜ್ಯ ಮಾಜಿ ಉಪಾಧ್ಯಕ್ಷರಾದ ಸುಲೋಚನ ಜಿ.ಕೆ. ಭಟ್, “ಹಾಲು, ಮೊಸರು, ವಿದ್ಯುತ್, ಬಸ್ ಪ್ರಯಾಣ ದರ, ಇಂಧನದ ಮೇಲಿನ ತೆರಿಗೆ ಹೀಗೆ ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ಸರಕಾರ ದುಬಾರಿಯಾಗಿಸಿದೆ ಉಚಿತ ಉಚಿತ ಎನ್ನುತ್ತಲೇ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರು ಹಬ್ಬ ಆಚರಿಸುವುದನ್ನೇ ದುಸ್ತರವಾಗಿಸಿದೆ,” ಎಂದು ಆರೋಪಿಸಿದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ಆರ್. ಚೆನ್ನಪ್ಪ ಕೋಟ್ಯಾನ್ ಮಾತನಾಡಿ, “ಸರ್ಕಾರದ ಮೂಲ ಜವಾಬ್ದಾರಿ ಜನರ ಜೀವನವನ್ನು ಸುಗಮವಾಗಿಸುವುದೇ ಹೊರತು, ಜನರ ಸುಲಿಗೆ ಮಾಡುವುದಲ್ಲ. ಜಿರಳೆಗಳು ಪ್ರತಿಭಟನೆ ನಡೆಸಬೇಕಿರುವುದು ಜನಜೀವನವನ್ನು ಹೈರಾಣಾಗಿಸಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಂದರು.
ಪ್ರಮುಖರ ಉಪಸ್ಥಿತಿ:
ಈ ಸಂದರ್ಭ ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ, ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ, ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್ ಕುಮಾರ್ ರಾಯಪ್ಪ ಕೋಡಿ, ನವೀನ್ ಗಟ್ಟಿ ನೆಟ್ಲ ಹಾಗೂ ಪ್ರಮುಖರಾದ ಮೋನಪ್ಪ ದೇವಸ್ಯ, ಕಮಲಾಕ್ಷಿ ಪೂಜಾರಿ, ಲಖೀತಾ ಆರ್. ಶೆಟ್ಟಿ, ಚಿದಾನಂದ ಮುರಬೈಲು, ಕಲ್ಲಡ್ಕ ಸನತ್ ಕುಮಾರ್ ರೈ, ಹಿರಣ್ಮಯೀ, ಜಿನರಾಜ್ ಕೋಟ್ಯಾನ್, ಅರವಿಂದ ರೈ, ನಾಗೇಶ್ ಭಂಡಾರಿ, ಆನಂದ ಶಂಬೂರು, ಪ್ರಭಾಕರ ಶೆಟ್ಟಿ ಬೈದರಡ್ಕ, ಯತೀಶ್ ಮೂಳಿಕೊಡಂಗೆ, ಕೌಶಿಲ್ ಶೆಟ್ಟಿ ಬಾಳಿಕೆ, ಜಯಶ್ರೀ ಕಲ್ಲಡ್ಕ, ಮಹಾಬಲ ಸಾಲಿಯನ್, ಶೇಖರ್ ಕೊಟ್ಟಾರಿ, ದಾಮೋದರ ಪೂಜಾರಿ, ರಾಜೇಶ್ ಕೊಟ್ಟಾರಿ, ಅಮಿತ್ ಕಲ್ಲಡ್ಕ, ನವೀನ್ ಕುದ್ರೆಬೆಟ್ಟು, ನವೀನ್ ಕೊಟ್ಟಾರಿ, ವಿಕ್ರಂ ಕಲ್ಲಡ್ಕ, ಜಗನ್ನಾಥ ನರಹರಿನಗರ, ಕೇಶವ ಮುರಬೈಲ್, ಸುನಿಲ್ ಗೋಳ್ತಮಜಲು, ಬೇಬಿ ನೆಟ್ಲ, ವಾಣಿ ಪ್ರದೀಪ್, ವಾಣಿ ಸಂದೀಪ್, ಲಕ್ಷ್ಮಿ ಪ್ರಭು, ಸುಷ್ಮಾ, ಪವಿತ್ರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಸ್ವಾಗತಿಸಿದರು. ಮೋನಪ್ಪ ದೇವಸ್ಯ ಧನ್ಯವಾದ ಸಮರ್ಪಿಸಿದರು