ಜಿಲ್ಲಾ ಸುದ್ದಿ

#FlyFromIXE – ಟ್ವೀಟ್ ಮಾಡಿ, ಮಂಗಳೂರು ಏರ್ ಪೋರ್ಟ್ ಅಭಿವೃದ್ಧಿಗೆ ಆರಂಭಗೊಂಡಿದೆ ಟ್ವಿಟ್ಟರ್ ಅಭಿಯಾನ

ಬೆಳಗ್ಗೆ 6ರಿಂದ ಆರಂಭಗೊಂಡಿದೆ. ಸಂಜೆ 6ರವರೆಗೆ ಇರುತ್ತದೆ. #FlyFromIXE ಹಾಕಿ, ಟ್ವೀಟ್ ಮಾಡಿರಿ. ಇದು ಮಂಗಳೂರು ಏರ್ ಪೋರ್ಟ್ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ತಲುಪುವಂತೆ ಮಾಡಲು ಟ್ವಿಟ್ಟರ್ ಅಭಿಯಾನ.

ಜಾಹೀರಾತು

ಸಾಂದರ್ಭಿಕ ಚಿತ್ರ

ಮಂಗಳೂರು, ಬಂಟ್ವಾಳ, ಪುತ್ತೂರು ಸಹಿತ ಹಲವು ಪ್ರದೇಶಗಳ ಯುವಕರು ಸೇರಿ ರಚಿಸಿರುವ ಟ್ವಿಟ್ಟರ್ ಅಭಿಯಾನದ ಗುಂಪಿದು. ಪುತ್ತೂರಿನ 18ರ ಹರೆಯದ ಯುವಕ ಶ್ರೀಕರ ಇದರ ರೂವಾರಿಗಳಲ್ಲೊಬ್ಬರು. ಇವರಂತೆ ಬೇರೆ ಬೇರೆ ಭಾಗಗಳ ಯುವಕರು, ಹಿರಿಯರು ಟ್ವೀಟ್ ನ ಅಗತ್ಯಗಳು ಹಾಗೂ ಮಂಗಳೂರು ವಿಮಾನ ನಿಲ್ದಾಣದಿಂದ ಜನಸಾಮಾನ್ಯರಿಗೂ ಒದಗಬಹುದಾದ ಲಾಭಗಳನ್ನು ಪಾಯಿಂಟ್ ಮಾಡಿಕೊಂಡಿದ್ದಾರೆ. ಎಲ್ಲವನ್ನೂ ಬೆಳಗ್ಗಿನಿಂದ ಸಂಜೆವರೆಗೆ ಸತತ ಟ್ವೀಟ್ ಮಾಡುವುದರ ಮೂಲಕ ಟ್ವಿಟ್ಟರ್ ನಲ್ಲಿ ಜನಪ್ರಿಯಗೊಳಿಸಿ, ಪ್ರಧಾನಿಯನ್ನು ತಲುಪಿಸುವಂತೆ ಮಾಡುವುದು ಇವರ ಉದ್ದೇಶ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಒಟ್ಟಾರೆ ಅಭಿವೃದ್ಧಿಗಾಗಿ ಟ್ವಿಟರ್ ಅಭಿಯಾನದ ಹ್ಯಾಷ್ ಟ್ಯಾಗ್ ಇದು. ಪ್ರಧಾನಿ @narendramodi, ನಾಗರಿಕ ವಿಮಾನಯಾನ ​​ಸಚಿವಾಲಯದ ಟ್ವೀಟರ್ ಖಾತೆ @MoCAGoI, ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪೂರಿ @HardeepSPuri, ವಿಮಾನ ನಿಲ್ದಾಣ ಪ್ರಾಧಿಕಾರ @AAIOfficial ಗೆ ಟ್ವೀಟ್ ಮಾಡಬಹುದು.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ