ಸಿನಿಮಾ

ಹಿರಿಯ ಪತ್ರಕರ್ತ ಉದಯಕುಮಾರ್ ಪೈ ಬರೆದ ಸರಣಿ – ನಾನು ನೋಡಿದ ರಾಜಕುಮಾರ ಎಲ್ಲ ಕಂತುಗಳಿಗೆ ಕ್ಲಿಕ್ ಮಾಡಿರಿ

ಕನ್ನಡ ಚಲನಚಿತ್ರ ಪತ್ರಕರ್ತರ ಸಾಲಿನ ಮೇರುಶ್ರೇಣಿಯಲ್ಲಿದ್ದೂ, ಚಲನಚಿತ್ರ ಇತಿಹಾಸದ ಜ್ಞಾನಸಂಪನ್ನರಾಗಿದ್ದು, ಅಜ್ಞಾತವಾಗಿ ಉಳಿದವರು ಹಿರಿಯರಾದ ಉದಯಕುಮಾರ ಪೈಗಳು. 60ರ ದಶಕದಿಂದ ತೀರಾ ಇತ್ತೀಚಿನವರೆಗಿನ ಸಿನಿಮಾ ಲೋಕದ ಒಳಹೊರಗಿನ ವಿಚಾರಗಳನ್ನೆಲ್ಲಾ ಸಮರ್ಥವಾಗಿ ಅಷ್ಟೇ ನಿಖರವಾಗಿ ಹೇಳಬಲ್ಲ ಕೆಲವೇ ಕೆಲವು ಪತ್ರಕರ್ತರ ಪೈಕಿ ಉದಯಕುಮಾರ ಪೈ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಅವರು ಸಿನಿಮಾ ಇತಿಹಾಸದ ಚಲಿಸುವ ವಿಶ್ವಕೋಶ, ಅಪಾರ ಸಾಹಿತ್ಯದ ಹಸಿವಿನ ಜ್ಞಾನದಾಹಿ, ನಿಗರ್ವಿ, ಸರಳಜೀವಿ. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಅತ್ಯುತ್ತಮ ಲೇಖನಕ್ಕೆ ಕೊಡಮಾಡುವ ಪ್ರಥಮ ಪ್ರಶಸ್ತಿಗೆ ಪೈಯವರು ಭಾಜನರಾಗಿದ್ದರು. ಚಂದಮಾಮ, ಚಿತ್ರದೀಪ, ವಿಜಯಚಿತ್ರ, ರೂಪತಾರಾ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದ ಅವರು ವೃತ್ತಿಜೀವನದ ಕೊನೆಯ ಅವಧಿಯಲ್ಲಿ ಉದಯವಾಣಿಯಲ್ಲಿ ಕೆಲಸ ಮಾಡಿದ್ದರು. ಅವರು ನಮ್ಮನ್ನಗಲಿದ್ದಾರೆ. 2016ರಲ್ಲಿ ಬಂಟ್ವಾಳನ್ಯೂಸ್ ಆರಂಭಗೊಂಡಾಗ ಹರಸಿದ್ದ ಅವರು ಕಳೆದ ವರ್ಷ ಪ್ರೀತಿಯಿಂದ ಸರಣಿ ಲೇಖನಗಳನ್ನು ಒದಗಿಸಿದ್ದರು. ಅದು ಡಾ. ರಾಜ್ ಕುಮಾರ್ ಜೊತೆ ಅವರ ಒಡನಾಟದ ನೆನಪಿನ ಗುಚ್ಛ, ಅದಕ್ಕೆ ಅವರೇ ಇಟ್ಟ ಟೈಟಲ್ ನಾನು ನೋಡಿದ ರಾಜಕುಮಾರ. ಅದರಲ್ಲವರು ಚೆನ್ನೈನ ಅನುಭವಗಳನ್ನೆಲ್ಲ ಒಂದೊಂದಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು. ಇನ್ನಷ್ಟು ಬರೆಯುವವರಿದ್ದರು. ಆದರೆ ವಿಧಿಯ ಆಟವೇ ಬೇರೆ. ಇಂದು ಅವರು ನಮ್ಮೊಂದಿಗಿಲ್ಲ. ಆದರೆ ಅವರ ಬರೆಹಗಳು ಶಾಶ್ವತವಾಗಿವೆ. ಡಾ. ರಾಜ್ ಕುರಿತು ಅವರು ಬರೆದ ಸರಣಿಯ ಕಂತುಗಳ ಲಿಂಕ್ ಇಲ್ಲಿದೆ. ಇದು ನಿಮಗೆ ಇತಿಹಾಸವನ್ನು ಕಟ್ಟಿಕೊಡುವುದಂತೂ ಗ್ಯಾರಂಟಿ. ಉದಯಕುಮಾರ ಪೈಗಳಿಗೆ ಬಂಟ್ವಾಳನ್ಯೂಸ್ ನಿಂದ ಭಾವಪೂರ್ಣ ಶ್ರದ್ಧಾಂಜಲಿ

ಜಾಹೀರಾತು

-ಹರೀಶ ಮಾಂಬಾಡಿ, ಸಂಪಾದಕ

*ಸರಣಿ -1: ನಾನು ನೋಡಿದ ರಾಜಕುಮಾರ*

https://bantwalnews.com/2019/04/23/rajkumar/

*ಸರಣಿ – 2 ಚಿತ್ರಾನ್ನ ಕಾಲದ ನೆನಪುಗಳು*

https://bantwalnews.com/2019/04/24/rajkumar-2/

*ಸರಣಿ -3 : ನಾನು ನೋಡಿದ ರಾಜಕುಮಾರ*

https://bantwalnews.com/2019/04/25/rajkumar-3/

*ಸರಣಿ – 4: ಸಾಹಿತ್ಯ, ಸಮಾಜವಾದದೊಂದಿಗೆ ನಾಟಕ*

https://bantwalnews.com/2019/04/29/rajkumar-4/

*ಸರಣಿ – 5: ನಾನು ನೋಡಿದ ರಾಜಕುಮಾರ*

https://bantwalnews.com/2019/05/08/rajkumar-5/

*ಸರಣಿ – 6: ಮದ್ರಾಸ್ ದೂರದರ್ಶನದಲ್ಲಿ ಕನ್ನಡ ಕಾರ್ಯಕ್ರಮ ಉದ್ಘಾಟಿಸಿದ್ದರು ಡಾ. ರಾಜ್*

https://bantwalnews.com/2019/05/11/doordarshan/

*ಸರಣಿ – 7: ಸಿನಿಮಾ ಪತ್ರಿಕೆ ಸೇರಿದ್ದು, ಮತ್ತೆ ಡಾ. ರಾಜ್ ಭೇಟಿಗೆ ಅವಕಾಶ*

https://bantwalnews.com/2019/06/14/rajkumar-7/

*ಸರಣಿ – 8: ಆ ಸಂದರ್ಶನದಲ್ಲಿ ಡಾ. ರಾಜ್ ಏನು ಹೇಳಿದ್ದರು ಗೊತ್ತಾ?*

https://bantwalnews.com/2019/07/06/rajkumar-8/

 

 

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.