ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಗುರುವಾರವೂ ಗಾಳಿ ಮಳೆ ಮುಂದುವರಿದಿದ್ದು, ಏಳು ಕಡೆಗಳಲ್ಲಿ ಹಾನಿ ಸಂಭವಿಸಿದೆ. ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಗೋಡೆ ಮೇಲೆ ಮರ ಬಿದ್ದು ರಸ್ತೆ ಬಂದ್ ಆಗಿದ್ದು, ಬಳಿಕ ಅದನ್ನು ತೆರವು ಮಾಡಲಾಯಿತು. ಪುದು ಗ್ರಾಮದ ಹೊನ್ನಮ್ಮ ಅವರ ಮನೆ, ಇಡ್ಕಿದು ಗ್ರಾಮದ ಸುಶೀಲ ಅವರ ಮನೆ, ಕೆದಿಲ ಗ್ರಾಮದ ಬೀಪಾತಿಮಾ ಮನೆ, ವಿಟ್ಲಪಡ್ನೂರು ಗ್ರಾಮದ ಸೇಸಪ್ಪ ಬೆದ್ರಕಾಡು ಅವರ ಮನೆ, ಪುದು ಗ್ರಾಮದ ಜಮೀಲ ಅವರ ಮನೆ, ಮಹಮ್ಮದ್ ಸಾಹಿದ್ ಎಂಬವರ ಮನೆಗೆ ಹಾನಿಯಾಗಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)