AMR DAM (File Photo)
ಕಡತಚಿತ್ರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದ್ದು, ನದಿ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದೆ. ಇದರಿಂದ ಜಿಲ್ಲೆಯಲ್ಲಿರುವ ಶಂಭೂರು, ಕಡಬ, ತುಂಬೆ ಮತ್ತು ನೀರಕಟ್ಟೆ ಡ್ಯಾಂಗಳಲ್ಲಿ ಸಮೃದ್ಧ ನೀರಿದೆ. ಶುಕ್ರವಾರ ಜಿಲ್ಲಾಡಳಿತ ಹೊರಡಿಸಿದ ಪ್ರಕಟಣೆಯ ಪ್ರಕಾರ, ಶಂಭೂರಿನಲ್ಲಿರುವ ಎಎಂಆರ್, ಕಡಬದಲ್ಲಿರುವ ದಿಶಾ, ನೀರಕಟ್ಟೆಯಲ್ಲಿರುವ ಸಾಗರ್ ಪವರ್ ಪ್ರಾಜೆಕ್ಟ್ ನ ಅಣೆಕಟ್ಟುಗಳು ಹಾಗೂ ಮಂಗಳೂರಿಗೆ ನೀರೊದಗಿಸುವ ತುಂಬೆ ಡ್ಯಾಂನಲ್ಲಿ ಉತ್ತಮ ನೀರ ಸಂಗ್ರಹವಿದೆ. ಶಂಭೂರು ಎಎಂಆರ್ ಡ್ಯಾಂನಲ್ಲಿ ಶುಕ್ರವಾರ 18.9 ಮೀಟರ್ (ಗರಿಷ್ಠ ಮಟ್ಟ 18.9 ಮೀ), ಕಡಬ ದಿಶಾ ಪವರ್ ಪ್ರಾಜೆಕ್ಟ್ ಡ್ಯಾಂನಲ್ಲಿ 3.5 ಮೀಟರ್ (ಗರಿಷ್ಠ 5 ಮೀಟರ್), ನೀರಕಟ್ಟೆಯ ಸಾಗರ್ ಪವರ್ ಪ್ರಾಜೆಕ್ಟ್ ನಲ್ಲಿ 31.8 ಮೀಟರ್ (ಗರಿಷ್ಠ ಮಟ್ಟ 38 ಮೀಟರ್) ನೀರ ಸಂಗ್ರಹವಿದ್ದರೆ, ತುಂಬೆ ಡ್ಯಾಂನಲ್ಲಿ 4.5 ಮೀಟರ್ (ಗರಿಷ್ಠ ಮಟ್ಟ 7 ಮೀಟರ್ ) ನೀರ ಸಂಗ್ರಹ ವಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಬಂಟ್ವಾಳದಲ್ಲಿ ನೇತ್ರಾವತಿ ನದಿ 4.9 ಮೀಟರ್ ಎತ್ತರದಲ್ಲಿ ಶುಕ್ರವಾರ ಹರಿಯುತ್ತಿದ್ದರೆ, ಶನಿವಾರ 5.1 ಮೀಟರ್ ಇತ್ತು (ಗರಿಷ್ಠ ಮಟ್ಟ 8.5 ಮೀಟರ್) , ಉಪ್ಪಿನಂಗಡಿಯಲ್ಲಿ ನೇತ್ರಾವತಿ 26.2 ಮೀಟರ್ (ಗರಿಷ್ಠ 31.5 ಮೀಟರ್) ಮತ್ತು ಗುಂಡ್ಯ ಹೊಳೆ 3.5 ಮೀಟರ್ (ಅಪಾಯದ ಮಟ್ಟ 5 ಮೀಟರ್) ಎತ್ತರದಲ್ಲಿ ಶುಕ್ರವಾರ ಹರಿಯುತ್ತಿತ್ತು.