ಪ್ರಮುಖ ಸುದ್ದಿಗಳು

ಕನ್ನಡದ ಪ್ರಸಿದ್ಧ ಪೋಷಕನಟ ಹುಲಿವಾನ್ ಗಂಗಾಧರಯ್ಯ ನಿಧನ

ಕನ್ನಡದ ಪ್ರಸಿದ್ಧ ಪೋಷಕನಟ, ರಂಗಭೂಮಿ ಕಲಾವಿದರೂ ಆಗಿದ್ದ ಹುಲಿವಾನ್ ಗಂಗಾಧರಯ್ಯ (70) ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಗಂಗಾಧರಯ್ಯ ಅವರು ಅನೇಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಪೋಷಕರ ನಟರಾಗಿ ಅಭಿನಯಿಸಿದ್ದಾರೆ.

ಜಾಹೀರಾತು

2016ರಲ್ಲಿ ಬಿಡುಗಡೆಯಾಗಿದ್ದ ‘ಕರ್ಮ’ ಸಿನಿಮಾ ಹುಲಿವಾನ್ ಗಂಗಾಧರಯ್ಯ ನಟಿಸಿದ ಕೊನೆಯ ಸಿನಿಮಾ. ಗಂಗಾಧರಯ್ಯ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದು, ಹಿರಿಯ ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಹೀಗೆ ಹೇಳಿದ್ದಾರೆ.

ಜಾಹೀರಾತು

ಗೆಳೆಯ ಹಾಗೂ ಅದ್ಭುತ ಕಲಾವಿದ ಹುಲಿವಾನ್ ಗಂಗಾಧರಯ್ಯ ನಿಧನ ಹೊಂದಿರುವುದು ತೀವ್ರ ನೋವು,ಸಂಕಟಗಳನ್ನು ತಂದಿದೆ.ನನ್ನ ಆಸ್ಫೋಟ ನಾಟಕದಲ್ಲಿ ಮುಖ್ಯ ಪಾತ್ರದ ಸಮಾನಾಂತರ ಪಾತ್ರ ಡ್ರೈವರ್ ಪಾತ್ರ ಇವರು ಮಾಡುತ್ತಿದ್ದ ರೀತಿ ಅವರಿಗೆ ಮಾತ್ರವಲ್ಲ ನಾಟಕಕ್ಕೂ ಜನಪ್ರಿಯತೆ ಹೆಚ್ಚಿಸಿತ್ತು. ಜಾರ್ಜ್ ಫರ್ನಾಂಡಿಸ್ ಈ ನಾಟಕವನ್ನು ನೋಡಿದಾಗ ಅವರು ಎಲ್ಲರ ಅಭಿನಯಕ್ಕಿಂತ ಹೆಚ್ಚು ಇಷ್ಟ ಪಟ್ಟಿದ್ದು ಹುಲಿವಾನ್ ಅಭಿನಯವನ್ನು. ನನ್ನ ‘ಮುಕ್ತ ಮುಕ್ತ’ ದಲ್ಲಿ ಮುಖ್ಯಮಂತ್ರಿ ರಾಜಾನಂದಸ್ವಾಮಿಯ ಪಾತ್ರ ವನ್ನು ಇವರು ವಹಿಸುತ್ತಿದ್ದ ರೀತಿ ಅನನ್ಯ ವಾಗಿತ್ತು.ಸಂವಾದಗಳಿಗೆ ಅತಿ ಹೆಚ್ಚು ಮೆಚ್ಚುಗೆ ಯ ಚಪ್ಪಾಳೆ ಇವರಿಗೆ ಸಿಗುತ್ತಿತ್ತು ನೂರ ಇಪ್ಪತ್ತೇಳು ಪ್ರದರ್ಶನ ಗಳನ್ನು ನಾಟಕ ಕಂಡಾಗ, ಮೂರೂವರೆ ವರ್ಷ ಒಂದು ಧಾರಾವಾಹಿ ಯಲ್ಲಿ ಒಟ್ಟಿಗೇ ಕೆಲಸ ಮಾಡಿದಾಗ ಹೆಚ್ಚು ದಿನ ಜತೆಯಲ್ಲಿ ದ್ದು ಹತ್ತಿರದ ಗೆಳೆಯರಾಗಿದ್ದೆವು.ಪರಸ್ಪರ ಕಷ್ಟ,ಸುಖಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾಗ ಗಟ್ಟಿಯಾದ ಆತ್ಮೀಯತೆ ಶುರುವಾಗುತ್ತದೆ. ಹಾಗೆ ಆತ್ಮೀಯರಾದವರು ಹುಲಿವಾನ್. ಆಧುನಿಕ ಕನ್ನಡ ರಂಗಭೂಮಿ ಯ ಚಳುವಳಿಯಲ್ಲಿ ಅತಿ ಮುಖ್ಯರೊಬ್ಬ ರಾಗಿದ್ದ ನನ್ನ ಆತ್ಮೀಯ ಗುರುಗಳ ರೀತಿಯಲ್ಲಿದ್ದ ಆರ್.ನಾಗೇಶ್ ತಮ್ಮ ಎಲ್ಲ ನಾಟಕ ಗಳಲ್ಲಿಯೂ ಹುಲಿವಾನ್ ರನ್ನು ಹಾಕಿಕೊಳ್ಳುತ್ತಿದ್ದರು.ಅಷ್ಟು ನಂಬಿಕೆ ಅವರ ಅಭಿನಯದಲ್ಲಿ. ನಂತರದ ದಿನಗಳಲ್ಲಿ ಅವರು ಪೂರ್ಣ ಪ್ರಮಾಣದ ಕೃಷಿಯಲ್ಲಿ ಅವರ ಊರಿನಲ್ಲಿ ತೊಡಗಿಕೊಂಡು, ರೈತಸಂಘದಲ್ಲಿ ತೊಡಗಿಕೊಂಡರು ಎಂದು ಸೀತಾರಾಮ್ ನೆನಪಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ