ಬಂಟ್ವಾಳ: ಆರೆಸ್ಸೆಸ್ ಸ್ವಯಂಸೇವಕ ಶರತ್ ಮಡಿವಾಳ ಅವರು ಹತ್ಯೆಗೀಡಾಗಿ ಮೂರು ವರ್ಷಗಳಾಗಿದ್ದು, ಶರತ್ ಸ್ಮರಣೆಯಲ್ಲಿ ಸಜೀಪ ವಲಯದ ಸಂಘ ಪರಿವಾರ ಕಾರ್ಯಕರ್ತರು ತಮ್ಮ ಮನೆ ವಠಾರದಲ್ಲಿ ಗಿಡ ನೆಡುವ ಮೂಲಕ ನಮನ ಸಲ್ಲಿಸಿದರು.
ಸಜೀಪದ ಸಂಘ ಪರಿವಾರದ ಕಾರ್ಯಕರ್ತರು ಹುತಾತ್ಮ ಸ್ವಯಂಸೇವಕನ ಸ್ಮಾರಕ ಪೀಠದಲ್ಲಿ ಸೇರದೇ ತಮ್ಮ ಮನೆಗಳಲ್ಲೇ ಶರತ್ ಮಡಿವಾಳರನ್ನು ಸ್ಮರಿಸುವ ಜೊತೆಗೆ ಕೊರೋನ ವಿರುದ್ಧ ಜಾಗೃತಿ ಮೂಡಿಸುವ ಸಂದೇಶವನ್ನು ನೀಡಿದರು. ಹುತಾತ್ಮನ ಬಲಿದಾನದ ದಿನ ಗೌರವಾರ್ಥವಾಗಿ ಪರಿಸರ ಜಾಗೃತಿ ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸಲಾಯಿತು.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…