ಬಂಟ್ವಾಳ

ರೋಟರಿ ಬಂಟ್ವಾಳ ಟೌನ್: 10ರಂದು ಪದಗ್ರಹಣ ಸಮಾರಂಭ

ಬಂಟ್ವಾಳ ಟೌನ್ ರೋಟರಿ ಕ್ಲಬ್ 2020-21ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 10ರಂದು ಬೆಳಗ್ಗೆ 10 ಗಂಟೆಗೆ ಬಿ.ಸಿ.ರೋಡಿನ ಕೈಕುಂಜೆ ಸಾಧನಾ ರೆಸಿಡೆನ್ಸಿಯಲ್ಲಿರುವ ರೋಟರಿ ಸಾಧನಾ ಹಾಲ್ ನಲ್ಲಿ ನಡೆಯಲಿದೆ. ಪದಗ್ರಹಣ ಅಧಿಕಾರಿಯಾಗಿ ರೋಟರಿ ಜಿಲ್ಲೆ 3180ರ ಪೂರ್ವ ಜಿಲ್ಲಾ ಗವರ್ನರ್ ಕೃಷ್ಣ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ರೋಟರಿ ಟೌನ್ ಅಧ್ಯಕ್ಷ ಜಯರಾಜ್ ಎಸ್. ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

ಇದುವರೆಗೆ ಅಧ್ಯಕ್ಷರಾಗಿ ಜಯರಾಜ್ ಎಸ್. ಬಂಗೇರ ಮತ್ತು ಕಾರ್ಯದರ್ಶಿಯಾಗಿ ಪಲ್ಲವಿ ಕಾರಂತ ಕಾರ್ಯನಿರ್ವಹಿಸಿದ್ದು, 2020-21ರ ಅಧ್ಯಕ್ಷರಾಗಿ ಪದ್ಮನಾಭ ರೈ, ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಮತ್ತು ಖಜಾಂಚಿಯಾಗಿ ಜ್ಯೋತೀಂದ್ರ ಶೆಟ್ಟಿ ಅಧಿಕಾರ ಸ್ವೀಕರಿಸುವರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಜಿಲ್ಲಾ ಗವರ್ನರ್ ಆಗಿ ಆಯ್ಕೆಗೊಂಡಿರುವ ಎನ್. ಪ್ರಕಾಶ್ ಕಾರಂತ, ವಲಯ ನಾಲ್ಕರ ಸಹಾಯಕ ಗವರ್ನರ್ ಪ್ರತಾಪ್ ಸಿಂಹ ನಾಯಕ್, ಜೋನಲ್ ಲೆಫ್ಟಿನೆಂಟ್ ಆಗಿರುವ ಜಯರಾಜ್ ಎಸ್. ಬಂಗೇರ ಭಾಗವಹಿಸುವರು. ಈ ಸಂದರ್ಭ ವಿವಿಧ ವಿಭಾಗಗಳ ಚೇರ್ಮನ್ ಗಳ ಪದಗ್ರಹಣವೂ ನಡೆಯಲಿದ್ದು, ಕ್ಲಬ್ ಸರ್ವೀಸ್ ಗೆ ಶನ್ಫತ್ ಶರೀಫ್, ಕಮ್ಯೂನಿಟಿ ಸರ್ವೀಸ್ ಗೆ ಶಾಂತರಾಜ್, ವೊಕೇಶನಲ್ ಸರ್ವೀಸ್ ಗೆ ಶಂಕರ ಶೆಟ್ಟಿ, ಇಂಟರ್ನಾಶನಲ್ ಸರ್ವೀಸ್ ಗೆ ಸುಧೀರ್ ಶೆಟ್ಟಿ, ಯೂತ್ ಸರ್ವೀಸ್ ಗೆ ಸ್ಟೀವನ್ ಡಿಸೋಜ, ಪೊಲಿಯೋ ಚೇರ್ಮನ್ ಆಗಿ ಡಿ. ಸಂತೋಷ್ ಬಾಬು, ಟಿ.ಆರ್.ಎಫ್. ಚೇರ್ಮನ್ ಆಗಿ ಸುರೇಶ್ ಸಾಲ್ಯಾನ್, ಮೆಂಬರ್ಶಿಪ್ ಡ್ರೈವ್ ಚೇರ್ಮನ್ ಆಗಿ ಸುಧಾಕರ ಸಾಲ್ಯಾನ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್ಮನ್ ಆಗಿ ದಯಾನಂದ ಶೆಟ್ಟಿ, ವಿನ್ಸ್ ಚೇರ್ಮನ್ ಆಗಿ ಸುಕುಮಾರ್, ಟೀಚ್ ಚೇರ್ಮನ್ ಆಗಿ ಶೇಷಪ್ಪ ಮೂಲ್ಯ, ವೆಬ್ ಚೇರ್ಮನ್ ಆಗಿ ಆಶಾಮಣಿ ಡಿ. ರೈ, ಸಾರ್ಜೆಂಟ್ ಎಟ್ ಆರ್ಮ್ಸ್ ಆಗಿ ಗಣೇಶ್ ಶೆಟ್ಟಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಅಧ್ಯಕ್ಷ ಜಯರಾಜ್ ಎಸ್. ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.