ಬಂಟ್ವಾಳ: ತಾಲೂಕಿನ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಟ್ಟು 65 ಸಾವಿರ ರೂಗಳನ್ನು ತಹಸೀಲ್ದಾರ್ ರಶ್ಮಿ ಎಸ್.ಆರ್. ಅವರ ಮೂಲಕ ಹಸ್ತಾಂತರಿಸಲಾಯಿತು. ಸಂಸ್ಥೆ ಪರವಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಹಸ್ತಾಂತರಿಸಿದರು. ಪಾಣೆಮಂಗಳೂರು 15 ಸಾವಿರ, ಬಂಟ್ವಾಳ 10 ಸಾವಿರ, ಮಾಣಿ 10 ಸಾವಿರ, ಮುಡಿಪು 10 ಸಾವಿರ, ವಿಟ್ಲ 10 ಸಾವಿರ ವಾಮದಪದವು ಘಟಕಗಳು 10 ಸಾವಿರ ರೂ ಅನ್ನು ತಾಲೂಕು ಘಟಕಕ್ಕೆ ನೀಡಿತ್ತು.
ನಾನಾ ಪದಾಧಿಕಾರಿಗಳಾದ ಬಿ.ಎಂ.ತುಂಬೆ, ಐತಪ್ಪ ಪೂಜಾರಿ, ದೇವದಾಸ್, ಜಯಂತ್ ನಾಯಕ್, ಉಮ್ಮರಗಿ ಶರಣಪ್ಪ, ಇಬ್ರಾಹಿಂ ಮಾಣಿ ,ನಾರಾಯಣ ನಾಯಕ್, ವಿಶ್ವನಾಥ್, ಶೇಕ್ ರಹಮತ್ತುಲ್ಲಾ, ಫಲಿಕ್ಸ್ ಡಿಸೋಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
| ಮಂಗಳೂರಿನಲ್ಲಿ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ ಕರಾವಳಿ ಧ್ವನಿ ಕಾರ್ಯಕ್ರಮ ಉದ್ಘಾಟನೆ (more…)