ಬಂಟ್ವಾಳ

351 ಆಶಾ ಕಾರ್ಯಕರ್ತೆಯರಿಗೆ ರಾಜೇಶ್ ನಾಯ್ಕ್ ಅವರಿಂದ ಆಹಾರ ಕಿಟ್

ಜಾಹೀರಾತು

ಕೊರೊನಾ ಹಿನ್ನೆಲೆಯಲ್ಲಿ ಮನೆ ಮನೆ ಭೇಟಿ ನೀಡಿ ತಮ್ಮ ಕರ್ತವ್ಯ ಸಲ್ಲಿಸುತ್ತಿರುವ ಬಂಟ್ವಾಳ ತಾಲೂಕಿನ 351 ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕ ನೆಲೆಯಲ್ಲಿ ಆಹಾರ ಕಿಟ್ ಅನ್ನು ವಿತರಿಸುವ ಕಾರ್ಯವನ್ನು ಶಾಸಕ ರಾಜೇಶ್ ನಾಯ್ಕ್ ಅವರು ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ 41 ಪೌರಕಾರ್ಮಿಕರಿಗೆ ಅವರು ವೈಯಕ್ತಿಕ ನೆಲೆಯಲ್ಲಿ ಆಹಾರ ಕಿಟ್ ವಿತರಿಸಿ, ಆರೋಗ್ಯ ತಪಾಸಣೆ ಮಾಡಿಸಿದ್ದರು. ಇದಲ್ಲದೆ ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯ ಪೌರಕಾರ್ಮಿಕರಿಗೂ ಆಹಾರ ಕಿಟ್ ವಿತರಿಸಲಾಗುವುದು ಎಂದವರು ತಿಳಿಸಿದ್ದಾರೆ. ಇದಕ್ಕಾಗಿ ತಂಡವನ್ನು ಅವರು ಸಿದ್ಧಪಡಿಸಿದ್ದು, ತಾಲೂಕಿನ ಪ್ರತಿ ಆರೋಗ್ಯ ಕೇಂದ್ರಗಳಿಗೆ ತೆರಳಿ ಆಯಾ ಭಾಗದ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಲಾಯಿತು. ಈ ಹಿನ್ನೆಲೆಯಲ್ಲಿ ಶನಿವಾರ ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ನೇತೃತ್ವದಲ್ಲಿ  ರಾಯಿ, ವಾಮದಪದವು, ಪುಂಜಾಲಕಟ್ಟೆ, ದೈವಸ್ಥಳ, ನಾವೂರ, ಪಂಜಿಕಲ್ಲು ಕಡೆಗಳಲ್ಲಿ ಕಿಟ್ ವಿತರಿಸಲಾಯಿತು. ಸೋಮವಾರ ಉಳಿದೆಡೆ ವಿತರಿಸಲಾಗುತ್ತದೆ ಎಂದು ದೇವದಾಸ ಶೆಟ್ಟಿ ತಿಳಿಸಿದ್ದಾರೆ.

ಶನಿವಾರ ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಅವರ ನೇತೃತ್ವದಲ್ಲಿ ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೧೧, ವಾಮದಪದವುನಲ್ಲಿ ೧೧, ಪುಂಜಾಲಕಟ್ಟೆಯಲ್ಲಿ ೨೨, ದೈವಸ್ಥಳ ೧೫, ನಾವೂರ ೬, ಪಂಜಿಕಲ್ಲು ೧೩ ಸೇರಿ ಒಟ್ಟು ೭೮ ಮಂದಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ವಿತರಿಸಲಾಯಿತು.

ಆಶಾ ಕಾರ್ಯಕರ್ತೆಯರಿಗೆ ಅಕ್ಕಿ ವಿತರಣೆಯ ಸಂಧರ್ಭದಲ್ಲಿ ದೇವದಾಸ್ ಶೆಟ್ಟಿಯವರ ಜತೆ ಸ್ಥಳೀಯರಾದ ದಯಾನಂದ ಸಪಲ್ಯ, ಹರೀಶ್ ಆಚಾರ್ಯ, ಪರಮೇಶ್ವರ ಪೂಜಾರಿ, ಸಂತೋಷ್ ಕುಮಾರ್, ಪುರುಷೋತ್ತಮ ಶೆಟ್ಟಿ, ದಿನೇಶ್ ದಂಬೆ,ಸಂತೋಷ್ ಜೈನ್, ಶ್ರೇಯಸ್, ಪ್ರಭಾಕರ ಶೆಟ್ಟಿ, ಪ್ರಣಾಥ್, ಡಾ.ಉಮೇಶ್ ಅಡ್ಯಂತಾಯ, ರಾಮಕೃಷ್ಣ ಮಯ್ಯ, ಚಿದಾನಂದ ರೈ, ಪ್ರಕಾಶ್ ಅಂಚನ್, ಚಿದಾನಂದ ಕುಲಾಲ್, ಕೇಶವ,ಮೋಹನ್ ದಾಸ್, ಕೇಶವ ಲೂಜಂತೋಡಿ ಮುಂತಾದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ