ಪಾಕಶಾಲೆಯೇ ವೈದ್ಯಶಾಲೆ

ಕಾಫಿ ಕುಡಿದ್ರಾ?… ಅದ್ರಲ್ಲೇನಿದೆ ಗೊತ್ತಾ?

  • ಡಾ.ಎ.ಜಿ.ರವಿಶಂಕರ್

www.bantwalnews.com

ಜಾಹೀರಾತು

ಕಾಫಿ ಆಯ್ತಾ?

ಇದು ಸಾಮಾನ್ಯವಾಗಿ ಚಹ ಕುಡಿಯುವವರನ್ನೂ ಕೇಳುವ ಪ್ರಶ್ನೆ. ಅಂದರೆ ಕಾಫಿ ಅಷ್ಟು ಪಾಪ್ಯುಲರ್. ಕೆಲವರು ಕಾಫಿಯನ್ನು ಹಿತವಾಗಿ ಹಾಗು ಮಿತವಾಗಿ ಬಳಸಿದರೆ ಇನ್ನು ಕೆಲವರು ಅವಾಗಾವಾಗ ಕುಡಿಯುವುದನ್ನು ಚಟವಾಗಿಸಿಕೊಂಡಿರುತ್ತಾರೆ. ನಿಯಮಿತವಾಗಿ ಬಳಸಿದರೆ ಕಾಫಿಯು ಆರೋಗ್ಯದಾಯಕವೂ ಮತ್ತು ಅತಿಯಾಗಿ ಬಳಸಿದರೆ ಅಸುಖಕಾರಕವೂ ಆಗಿದೆ.

  1. ಕಾಫಿಯು ನರಮಂಡಲದ ಉತ್ತೆಜಕವಾಗಿದ್ದು ವಯಸ್ಕರಲ್ಲಿ ಕಾಣುವ ಅಂಗಾಂಗಗಳ ನಡುಕವನ್ನು(parkinsons disease ) ಹತೋಟಿಗೆ ತರಲು ಸಹಕರಿಸುತ್ತದೆ.
  2. ಕಾಫಿ ಪಿತ್ತಜನಕಾಂಗಕ್ಕೆ ಉತ್ತೇಜಕವಾಗಿದ್ದು ರಕ್ತ ಪರಿಚಲನೆಯನ್ನು ಸರಿಯಾಗಿಸುತ್ತದೆ ಮತ್ತು ಪಿತ್ತಜನಕಾಂಗದ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
  3. ಕಾಫಿ ಮನಸ್ಸಿಗೆ ಸ್ಫೂರ್ತಿ ಮತ್ತು ಉತ್ಸಾಹವನ್ನು ನೀಡುವುದರ ಮೂಲಕ ಮನುಷ್ಯನ ಆಯಾಸವನ್ನು ನಿವಾರಿಸುತ್ತದೆ ಮತ್ತು ಕ್ರಿಯಾಶೀಲರನ್ನಾಗಿಸುತ್ತದೆ.
  4. ಕಾಫಿಯು ತಲೆ ನೋವನ್ನು (ಮೈಗ್ರೈನ್ ) ಶಮನಗೊಳಿಸುತ್ತದೆ.
  5. ಹಸಿವಿನ ಪ್ರಮಾಣವನ್ನು ಕಡಿಮೆ ಮಾಡುವುದರ ಮೂಲಕ ಶರೀರದ ಅಧಿಕ ತೂಕವನ್ನು ಕಡಿಮೆ ಮಾಡುತ್ತದೆ.
  6. ಶರೀರದ ಮಾಂಸಖಂಡಗಳ ನೋವನ್ನು ಕಡಿಮೆ ಮಾಡುತ್ತದೆ.
  7. ಇದು ಹೃದಯಕ್ಕೆ ಬಲದಾಯಕವಾಗಿದ್ದು ಹೃದಯದ ಕ್ರಿಯಾಸಾಮರ್ಥ್ಯವನ್ನು ಅಧಿಕಗೊಳಿಸುತ್ತದೆ.
  8. ಮೆದೋಜೀರಕ ಗ್ರಂಥಿಯನ್ನು ಉತ್ತೇಜಿಸುವ ಮೂಲಕ ಮಧುಮೇಹವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  9. ಕಾಫಿಹುಡಿಯನ್ನು ಚರ್ಮಕ್ಕೆ ಹಾಕಿ ಉಜ್ಜಿದರೆ ಸತ್ತ ಚರ್ಮವು ಹೋಗಿ ಚರ್ಮಕ್ಕೆ ಕಾಂತಿ ಹಾಗು ನುಣುಪು ಬರುತ್ತದೆ.
  10. ತಲೆಗೆ ಹಾಕುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಕೂದಲು ನೀಳವಾಗಿ ಬೆಳೆಯುತ್ತದೆ.

ಅತಿಯಾಗಿ ಬಳಸಿದೆರೆ ……………

ಜಾಹೀರಾತು
  • ಹೊಟ್ಟೆನೋವು, ಮಲಬದ್ದತೆ ಅಥವಾ ಭೇದಿ ಕಾಣಿಸಿಕೊಳ್ಳಬಹುದು.
  • ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗಿ ಬಾಯಾರಿಕೆ,ಮಾಂಸಖಂಡಗಳ ನೋವು ಇತ್ಯಾದಿಗಳು ಕಾಣಿಸಿಕೊಳ್ಳಬಹುದು
  • ಇದು ನಿದ್ರಾಹೀನತೆಗೆ ಕಾರಣವಾಗಬಹುದು.
  • ಅತಿಯಾದ ಸೇವನೆ ಹೃದಯವನ್ನು ಅವಸಾದಗೊಳಿಸುತ್ತದೆ.
  • ಇದು ಚಟವಾಗಿ ಪರಿಣಮಿಸಿ ಶರೀರದ ಕ್ರಿಯೆಗಳನ್ನು ಮಂದಗೊಳಿಸಬಹುದು.

(ಲೇಖಕರು ಆಯುರ್ವೇದದಲ್ಲಿ ಎಂ.ಎಸ್. ಪದವೀಧರರು ವಿಟ್ಲದಲ್ಲಿ ಚಿಕಿತ್ಸಾಲಯವನ್ನು ಹೊಂದಿದ್ದಾರೆ)

 

www.bantwalnews.com ಸಂಪಾದಕ: ಹರೀಶ ಮಾಂಬಾಡಿ. for advertisements pls contact 9448548127

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.